ಚಿತ್ತಾಪುರ: ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ಇ-ಖಾತಾ ಮಾಡಿಕೊಳ್ಳಲು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಕಟ್ಟಡಗಳು ಮತ್ತು ನಿವೇಶನಗಳನ್ನು ಹೊಂದಿರುವ ಆಸ್ತಿ ಮಾಲೀಕರು ತಮ್ಮ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ಇ-ಖಾತಾ ಮಾಡಿಕೊಳ್ಳಬೇಕು ಎಂದು ಪಟ್ಟಣದ ಸಾರ್ವಜನಿಕರಿಗೆ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಕರೆ ನೀಡಿದ್ದಾರೆ.
ಸರ್ಕಾರದ ಅಧಿನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಬೆಂಗಳೂರುರವರ ಅಂತಿಮ ಅಧಿಸೂಚನೆಯಂತೆ ಪುರಸಭಾ ವ್ಯಾಪ್ತಿಯೊಳಗೆ ಬರುವ ಸರ್ಕಾರಿ/ಸ್ಥಳೀಯ ಸಂಸ್ಥೆಯ ಒಡೆತನದಲ್ಲಿರುವ ಆಸ್ತಿಗಳನ್ನು ಹೊರತುಪಡಿಸಿ ಇನ್ನೂಳಿದ ಕಟ್ಟಡ/ನಿವೇಶನಗಳಿಗೆ ಆಸ್ತಿ ನಿರ್ಧರಣೆಗೊಳಿಸಿ, 2024-25 ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಆಸ್ತಿ ತೆರಿಗೆ ಪಾವತಿಸಿಕೊಂಡು ಆಸ್ತಿ ಮಾಲೀಕರಿಂದ ಅವಶ್ಯಕ ದಾಖಲಾತಿಗಳನ್ನು ಹಾಜರುಪಡಿಸಿಕೊಂಡು, ಕರ್ನಾಟಕ ಪೌರಸಭೆಗಳ ಅಧಿನಿಯಮದ 1964ರ ಸೆಕ್ಷನ್ 106(1ಬಿ)(ii) ಪ್ರಕಾರ ಗಣಕೀಕೃತ ನಮೂನೆ-3 ಮತ್ತು ನಮೂನೆ-3ಎ ರನ್ನು ಪಡೆದುಕೊಂಡು ನೋಂದಾಯಿತ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ ಆದ್ದರಿಂದ ಎಲ್ಲಾ ಆಸ್ತಿ ಮಾಲೀಕರುಗಳು ಈ ಸದುಪಯೋಗವನ್ನು ಪಡೆದುಕೊಂಡು ನಿಮ್ಮ ಆಸ್ತಿಗಳನ್ನು ಗಣಕೀಕೃತ ಮಾಡಿಕೊಳ್ಳಲು ತಿಳಿಪಡಿಸಿದ್ದಾರೆ.
ಸದರಿ ನಮೂನೆ -3ಎ ಪಡೆಯಲು ಬೇಕಾದ ದಾಖಲಾತಿಗಳು: ನೋಂದಣಿ ಕಚೇರಿಯಿಂದ ಖರೀದಿ ಪತ್ರ ಮತ್ತು ಇಸಿ, ವಿಭಜನೆ ಪತ್ರ, ಧಾನ ಪತ್ರ (ಗಿಫ್ಟ್ ಡಿಡ್), ಆಸ್ತಿ ತೆರಿಗೆ ಚಲನ್ ಪ್ರತಿ, ಆಸ್ತಿ ಮಾಲೀಕರ ಭಾವಚಿತ್ರ, ಆಸ್ತಿ ಛಾಯಾಚಿತ್ರ ಆಧಾರ್ ಕಾರ್ಡ್ ಇತರೆ ಆಸ್ತಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಸಲ್ಲಿಸಿ ನಮೂನೆ -3ಎ ಪಡೆದುಕೊಳ್ಳಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಹೆಲ್ಪ್ ಡೆಸ್ಕ್ ಸ್ಥಳಗಳು: ಪಟ್ಟಣದ ಕೆನರಾ ಬ್ಯಾಂಕ್ ಎದುರುಗಡೆಯ ಪುರಸಭೆ ಮಳಿಗೆ ಹಾಗೂ ಪುರಸಭೆ ಕಚೇರಿಯಲ್ಲಿ ಎರಡು ಹೆಲ್ಪ್ ಡೆಸ್ಕ್ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶರಣಪ್ಪ ಮಡಿವಾಳ 9972455403, ರಿಯಾಜೋದ್ದಿನ್ ಕಂದಾಯ ನಿರೀಕ್ಷಕರು 9118484446, ಮರಿಯಣ್ಣ ಕರವಸೂಲಿಗಾರ 9845643905, ರಾಜಕುಮಾರ್ ಕರವಸೂಲಿಗಾರ 9901098874, ರವಿಶಂಕರ್ ಎಸ್ಡಿಎ 9036534231 ಇವರಿಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.