ಅಳ್ಳೋಳ್ಳಿ ಗ್ರಾಮದಲ್ಲಿ ಜಾನುವಾರುಗಳಿಗೆ ಉಚಿತ ಲಸಿಕೆ ಮತ್ತು ಆರೋಗ್ಯ ಶಿಬಿರ ಯಶಸ್ವಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಗ್ರಾಮದಲ್ಲಿ ಜಾನುವಾರುಗಳಿಗೆ ಉಚಿತ ಲಸಿಕೆ ಮತ್ತು ಆರೋಗ್ಯ ಶಿಬಿರ ಪಶು ವೈದ್ಯಾಧಿಕಾರಿ ಡಾ.ಶಂಕರ ಕಣ್ಣಿ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.

ದನಗಳಿಗೆ ಚರ್ಮಗಂಟು ರೋಗದ (LSD) ವಿರುದ್ಧ ಲಸಿಕೆ ಹಾಕಲಾಯಿತು. ಕುರಿ ಮತ್ತು ಮೇಕೆಗಳಿಗೆ ಕರುಳುಬೇನೆ ಲಸಿಕೆ ಹಾಕಲಾಯಿತು, ಜಾನುವಾರು ಆರೋಗ್ಯ ತಪಾಸನೆ ಮಾಡಿ ಚಿಕಿತ್ಸೆ ನೀಡಲಾಯಿತು. ಜಾನುವಾರು ಮಾಲೀಕರಿಗೆ ಜಂತುನಾಶಕ ಔಷಧಿ, ಲವಣ ಮಿಶ್ರಣ ಮತ್ತು ಪಶು ಆರೋಗ್ಯ ಟಾನಿಕ್ ನೀಡಲಾಯಿತು. ಜಾನುವಾರ ಮಾಲೀಕರಿಗೆ ಬರ ಪರಿಸ್ಥಿತಿಯಲ್ಲಿ ಜಾನುವಾರುಗಳ ನಿರ್ವಹಣೆ ಬಗ್ಗೆ ತಿಳಿಸಲಾಯಿತು.

ಸುಮಾರು 150 ದನಗಳಿಗೆ ಮತ್ತು 280 ಮೇಕೆಗಳಿಗೆ ಲಸಿಕೆ ಹಾಕಲಾಯಿತು. ಮತ್ತು 45 ಕರುಗಳಿಗೆ ಜಂತುನಾಶಕ ಔಷದಿ ಹಾಕಲಾಯಿತು. ಕಡಿಮೆ ವೆಚ್ಚದಲ್ಲಿ ಜಾನುವಾರು ಮೇವು ಉತ್ಪಾದಿಸಬಹುದಾದ ಹೈಡ್ರೋಫೋನಿಕ್ಸ್ ಬಗ್ಗೆ ಮಾಹಿತಿ ನೀಡಲಾಯಿತು. ಹೈಡ್ರೋಫೋನಿಕ್ಸ್ ಬೆಳೆದ ರೈತರಿಗೆ ಪ್ರೋತ್ಸಾಹ ನೀಡಲಾಯಿತು.

ಜಾನುವಾರು ಮಾಲೀಕರು ಅತಿ ಉತ್ಸಾಹದಿಂದ ಜಾನುವಾರ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಡಾ.ಆಕಾಶ, ಹಿರಿಯ ಪಶು ವೈದ್ಯಧಿಕಾರಿ ಡಾ. ಸಚಿನ್ ಪಶುವೈದ್ಯಧಿಕಾರಿ ಮತ್ತು ಸಿಬ್ಬಂದಿಯವರು ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!