ಸಿದ್ದಲಿಂಗೇಶ್ವರ ಮಹಾರಾಜ ಕೀ ಜೈ…ಭಕ್ತರ ಜಯಘೋಷಗಳ ನಡುವೆ ಅಳ್ಳೋಳ್ಳಿ ಸಿದ್ದಲಿಂಗೇಶ್ವರರ 9ನೇ ರಥೋತ್ಸವ ಸಂಭ್ರಮ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಸಾವಿರ ದೇವರ ಸಂಸ್ಥಾನ ಮಠದ ಸದ್ಗುರು ಶ್ರೀ ಸಿದ್ದಲಿಂಗೇಶ್ವರರ 9 ನೇ ಜಾತ್ರಾ ಉತ್ಸವ ಪ್ರಯುಕ್ತ ಮಂಗಳವಾರ ಸಂಜೆ 7.30ಕ್ಕೆ ಅಪಾರ ಭಕ್ತರ ಮಧ್ಯೆ ಸಂಭ್ರಮ ಸಡಗರದಿಂದ ರಥೋತ್ಸವ ಜರುಗಿತು.
ತಳಿರು ತೋರಣ ಹಾಗೂ ಹೂವುಗಳಿಂದ ಅಲಂಕೃತಗೊಂಡಿದ್ದ ರಥಕ್ಕೆ ಸಾವಿರ ದೇವರ ಸಂಸ್ಥಾನ ಮಠದ ಶ್ರೀ ಸಂಗಮನಾಥ ಸ್ವಾಮಿಗಳು ಪೂಜೆ ಸಲ್ಲಿಸಿ ನಂತರ ರಥಾರೋಣ ಮಾಡಿದ ಬಳಿಕ ಅಪಾರ ಭಕ್ತರ ಜಯಘೋಷಗಳ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ತರಾಭೀಮುಖವಾಗಿ ಚಲಿಸಿದ ರಥವು ಯಲ್ಲಮ್ಮ ದೇವಸ್ಥಾನದ ಪಾದಗಟ್ಟೆವರೆಗೆ ತಲುಪಿ ಮರಳಿ ಬಂದಿತು.
ಇದಕ್ಕೂ ಮೊದಲು ಸಂಜೆ 5 ಗಂಟೆಗೆ ಗ್ರಾಮದ ಹಳೆಯ ಮಠದಿಂದ ವಾದ್ಯಗಳ ಸಮೇತ ಕುಂಭ ಮತ್ತು ಕಳಸವನ್ನು ಮೆರವಣಿಗೆ ಮೂಲಕ ತರಲಾಯಿತು.
ರಥೋತ್ಸವದಲ್ಲಿ ಚಿತ್ತಾಪುರ ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ, ಹಲಕರ್ಟಿ ಸಿದ್ದೇಶ್ವರ ಹಿರೇಮಠದ ರಾಜಶೇಖರ ಶಿವಾಚಾರ್ಯ, ಬೆನಕನಹಳ್ಳಿ ವಿರಕ್ತಮಠದ ಕೇದಾರಲಿಂಗ ಸ್ವಾಮಿ, ದಂಡಗುಂಡ ಸಂಗನಬಸವ ಶಿವಾಚಾರ್ಯರು, ಪ್ರಮುಖರಾದ ಶಾಂತಣ್ಣ ಚಾಳಿಕಾರ, ರಾಜುಗೌಡ ಮಾಲಿಪಾಟೀಲ, ಸೋಮಶೇಖರಗೌಡ ಮುಸೇನಿ, ವೀರಾರೆಡ್ಡಿ ಮುಸೇನಿ, ಮಹದೇವಪ್ಪ ಡೋಣಗಾಂವ, ರವಿಕುಮಾರ ಪಡ್ಲಾ, ಶ್ರೀಶೈಲ ಗುತ್ತೇದಾರ, ಶಿವಣ್ಣ ಹೂಗಾರ, ದೇವಿಂದ್ರಪ್ಪ ಹಾದಿಮನಿ, ಶಾಂತಕುಮಾರ ಎಣ್ಣಿ, ಈರಣ್ಣ ಮಲ್ಕಂಡಿ, ರಾಜಶೇಖರ ಡೋಣಗಾಂವ, ಮಂಜುಗೌಡ, ಮರೆಪ್ಪ ದಂಡಗುಂಡ ಮಹೇಂದ್ರಗೌಡ ಗುತ್ತೇದಾರ ಯಾದಗಿರಿ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಜಾತ್ರಾ ಉತ್ಸವದಲ್ಲಿ ಭಾಗವಹಿಸಿದ್ದರು.
ರಥೋತ್ಸವ ಹಿನ್ನೆಲೆ ಚಿತ್ತಾಪುರ ಪೊಲೀಸ್ ಠಾಣೆ ವತಿಯಿಂದ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸಂಸ್ಥಾನ ಮಠದ ವತಿಯಿಂದ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಥಳೀಯರಾದ ಸಂಗಣ್ಣಗೌಡ ಅನವಾರ್ ರಥಕ್ಕೆ ಹೂವಿನ ಅಲಂಕಾರ ಸೇವೆ ಮಾಡಿದ್ದರು.