ಶರಣಬಸವ ವಿಶ್ವವಿದ್ಯಾಲಯದ ವತಿಯಿಂದ ಅಮರೇಶ್ವರ ಚಿಂಚನಸೂರ ಅವರಿಗೆ ಸ್ತ್ರೀ ರತ್ನ ಪ್ರಶಸ್ತಿ ಪ್ರದಾನ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ನಗರದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಶರಣಬಸವ ವಿಶ್ವವಿದ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಚಿತ್ತಾಪುರಿನ ಶ್ರೀ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ.ಅಮರೇಶ್ವರಿ ಬಾಬುರಾವ್ ಚಿಂಚನಸೂರ ಅವರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅವ್ವಾಜೀ ರವರು ಸ್ತ್ರೀ ರತ್ನ ಪ್ರಶಸ್ತಿ -2026 ಪ್ರದಾನ ಮಾಡಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ್, ಡಾ. ಲಕ್ಷ್ಮಿ ಪಾಟೀಲ್ ಮಾಕಾ ಮತ್ತು ಮಾಜಿ ಕೇಂದ್ರ ಸಚಿವರ ಧರ್ಮಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಮತ್ತು ಡಾ. ರೂಪ ಅಯ್ಯರ್, ಕಲಬುರಗಿ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರು ವರ್ಷಾ ರಾಜೀವ್ ಜಾನೆ, ಉಪ ಮಹಾಪೌರರು ತೃಪ್ತಿ ಎಸ್ ಲಾಕೆ, ವಿರೋಧ ಪಕ್ಷದ ನಾಯಕಿ ಶೋಭಾ ದೇಸಾಯಿ, ಕುಲಸಚಿವ ಪ್ರೊ. ಅನಿಲ್ ಕುಮಾರ್ ಜಿ ಬಿಡುವೆ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಅಮರೇಶ್ವರಿ ಚಿಂಚನಸೂರ ಸಂಕ್ಷಿಪ್ತ ಪರಿಚಯ:
ಖ್ಯಾತ ಉದ್ಯಮಿದಾರರು ಹಾಗೂ ಶ್ರೀ ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ಕೇಂದ್ರ ಆಹಾರ ನಿಗಮದ ಮಾಜಿ ನಿರ್ದೇಶಕರಾದ ಡಾ. ಅಮರೇಶ್ವರಿ ಬಾಬುರಾವ್ ಚಿಂಚನಸೂರ ಅವರು 1957ರಲ್ಲಿ ಕಲಬುರಗಿಯಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶ್ರೀ ಶರಣಬಸವೇಶ್ವರ ಸಂಸ್ಥಾನದ ಒಂದು ಭಾಗವಾದ ಮಹಾದೇವಿ ಕನ್ಯಾ ಪ್ರೌಢ ಶಾಲೆಯಲ್ಲಿ, ಮುಗಿಸಿದರು. ಮುಂದೆ ಪದವಿ ಶಿಕ್ಷಣವನ್ನು ಗೋದುತಾಯಿ ಮಹಿಳಾ ಮಹಾವಿದ್ಯಾಲಯದಲ್ಲಿ ಪೂರೈಸಿದ್ದಾರೆ. ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರು ಮಾಜಿ ಸಚಿವ ಬಾಬುರಾವ್ ಚಿಂಚಿನಸೂರ ಅವರ ಧರ್ಮಪತ್ನಿಯಾಗಿದ್ದು, ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳವರಾಗಿದ್ದು, ತಮ್ಮ ಪತಿಯ ಸಮಾಜಸೇವೆ ಶೈಕ್ಷಣಿಕ ಸೇವೆ ರಾಜಕೀಯದಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಅವರ ಏಳಿಗೆಯಲ್ಲಿ ಸಹಭಾಗಿಗಳಾಗಿದ್ದಾರೆ. ಸುಮಾರು 42 ವರ್ಷಗಳಿಂದ ಖ್ಯಾತ ಉದ್ದಿಮೆದಾರರಾಗಿ, ಜೊತೆಗೆ ಶ್ರೀ ಗಂಗಾ ಪರಮೇಶ್ವರಿ ಎಜ್ಯುಕೇಶನ ಟ್ರಸ್ಟ್ ಅಧ್ಯಕ್ಷರಾಗಿ ಬಹು ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಕೇಂದ್ರ ಆಹಾರ ನಿಗಮದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಸೇವೆಗಾಗಿ ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವ ಪ್ರಶಸ್ತಿ, ಇಂಟರ್ ನ್ಯಾಷನಲ್ ಹ್ಯುಮನ್ ಡೆವೆಲಪ್‌ಮೆಂಟ್ ಯುನಿವರ್ಸಿಟಿ ವತಿಯಿಂದ ಪ್ರಶಸ್ತಿ, z ಕನ್ನಡ News ವತಿಯಿಂದ ವೀರ ಕನ್ನಡತಿ ಪ್ರಶಸ್ತಿ, ಗುರು ಸಾವಿತ್ರಿ – 2026ರ ಪ್ರಶಸ್ತಿ, ಸೇವಾ ಪ್ರಶಸ್ತಿ, ಇಂಟರ್ ನ್ಯಾಷನಲ್ ಹ್ಯುಮನ್ ಡೆವೆಲಪ್‌ಮೆಂಟ್ ಯುನಿವರ್ಸಿಟಿ (Iao) USA ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ, ಹೀಗೆ ಮುಂತಾದ ಪ್ರಶಸ್ತಿಗಳು ಇವರ ಮುಡಿಗೇರಿವೆ. ಶ್ರೀಯುತರ ಬಹುಮುಖ ಸೇವೆಯನ್ನು ಗುರುತಿಸಿ ಇವರಿಗೆ ಶರಣಬಸವ ವಿಶ್ವವಿದ್ಯಾಲಯದ ವತಿಯಿಂದ ಕೊಡಮಾಡುವ 2026 ನೇ ಸಾಲಿನ ಸ್ತ್ರೀ ರತ್ನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

