Oplus_0

ಜನ ಸಾಗರದ ನಡುವೆ ಶ್ರೀ ಶರಣಬಸವೇಶ್ವರರ ಅದ್ದೂರಿ ಮಹಾರಥೋತ್ಸವ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಸಿದ್ದ ಧಾರ್ಮಿಕ ಸ್ಥಳವಾದ ಶ್ರೀ ಶರಣಬಸವೇಶ್ವರರ 204ನೆಯ ಜಾತ್ರೋತ್ಸವ ನಿಮಿತ್ತ ಭಾನುವಾರ ಸಂಜೆ ಜನ ಸಾಗರದ ನಡುವೆ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಮಹಾರಥೋತ್ಸವವು ಅದ್ದೂರಿಯಾಗಿ ಜರುಗಿತು.

ಶರಣಬಸವೇಶ್ವರ ಸಂಸ್ಥಾನದ 9ನೆಯ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಅವರು ಪ್ರಸಾದ ಬಟ್ಟಲು (ಬೆಳ್ಳಿ ತಟ್ಟೆ) ಹಾಗೂ ಲಿಂಗ ಸಜ್ಜಿಕೆ (ಪವಿತ್ರ ಲಿಂಗವನ್ನು ಇಟ್ಟುಕೊಳ್ಳಲು ಸಂತರು ಬಳಸುತ್ತಿದ್ದ ಶ್ರೀಗಂಧದ ಪೆಟ್ಟಿಗೆ) ತೋರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥಾನದ ಅಧ್ಯಕ್ಷೆ ಮಾತೋಶ್ರೀ ಡಾ.ದಾಕ್ಷಾಯಣಿ ಅವ್ವಾಜಿ, ಕಾರ್ಯದರ್ಶಿ ಬಸವರಾಜ ದೇಶಮುಖ, ಭವಾನಿ ಎಸ್. ಅಪ್ಪ, ಶಿವಾನಿ ಎಸ್.ಅಪ್ಪ, ಮಹೇಶ್ವರಿ ಎಸ್.ಅಪ್ಪ ಡಾ.ಅಲ್ಲಮಪ್ರಭು ದೇಶಮುಖ ಸೇರಿದಂತೆ ಸಂಸ್ಥಾನದ ಪ್ರಮುಖರು ಇದ್ದರು.

ಸಹಸ್ರಾರು ಭಕ್ತರು ಇದೇ ವೇಳೆಯಲ್ಲಿ ಶರಣಬಸವೇಶ್ವರ ಮಹಾರಾಜ್ ಕೀ ಜೈ ಎನ್ನುವ ಜೈಘೋಷ ಹಾಕಿದರು.

ರಥೋತ್ಸವ ಪ್ರಾರಂಭವಾಗುವ ಮೊದಲು ದೇವಾಲಯದಲ್ಲಿ ಅಲಂಕರಿಸಲಾದ ರಥದಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳು ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಇದೇ ವೇಳೆಯಲ್ಲಿ ದೇವಸ್ಥಾನದ ಆವರಣದಲ್ಲಿ ನಂದಿಕೋಲು, ಪಲ್ಲಕ್ಕಿ ಉತ್ಸವ ನಡೆಯಿತು.

ಶ್ರೀ ಶರಣಬಸವೇಶ್ವರರ ಮಹಾರಥೋತ್ಸವಕ್ಕೆ ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್, ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ತಾಲೂಕುಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಕೆಲವು ಭಕ್ತರು ಕಾಲ್ನಡಿಗೆಯ ಮೂಲಕ ದೇವಸ್ಥಾನಕ್ಕೆ ತಲುಪಿದರೆ ಇನ್ನುಳಿದವರು ಕಾರು, ಕ್ರಷರ್, ಜೀಪ್, ಮಿನಿ ಬಸ್, ಮತ್ತಿತ್ತರ ವಾಹನಗಳ ಮೂಲಕ ಆಗಮಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರ ಪೊಲೀಸರು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!