Oplus_0

ಚಿತ್ತಾಪುರ ಸಾಮಾಜಿಕ ಜಾಲತಾಣಗಳ ಮೂಲಕ ಅಂಬೇಡ್ಕರ್ ಅವಹೇಳನ: ಓರ್ವನ ಬಂಧನ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ ರವರ ಬಗ್ಗೆ ಅವಹೇಳನಕಾರಿಯಾಗಿ ಹಾಗೂ ಕೋಮುಗಳ ಮಧ್ಯೆ ದ್ವೇಷ ಭಾವನೆ ಬೆಳೆಯುವಂತೆ ಮಾತನಾಡಿ, ಜಾತಿ ನಿಂದನೆ ಮಾಡಿದ ಜಗನ್ನಾಥ ಶಿವುಕುಮಾರ ದಂಡೋತಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೃಥ್ವಿರಾಜ್ ಸಾಗರ ನೀಡಿದ ದೂರಿನನ್ವಯ ಎಸ್ಸಿ ಎಸ್ಟಿ ಕಾಯ್ದೆ 1989 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಿಎಸ್ಐ ಶ್ರೀಶೈಲ್ ಅಂಬಾಟಿ ತಿಳಿಸಿದ್ದಾರೆ.

ಪಟ್ಟಣದ ಮಳಖೇಡ ರಸ್ತೆಯಲ್ಲಿರುವ ಐ.ಬಿ ಗೋಪಾಲ್ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಜಗನ್ನಾಥ ಶಿವುಕುಮಾರ ದಂಡೋತಿ ಇತನು ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿಯಾಗಿ ತನ್ನ ಮೊಬೈಲ್‌ನಲ್ಲಿ ವೈಸ್ ರೆಕಾರ್ಡಿಂಗ್ ಮಾಡಿ ಯಾರಿಗೋ ಕಳುಹಿಸುತ್ತಿದ್ದಾಗ ಅಲ್ಲಿಯೇ ಇದ್ದ ಅಭಿಷೇಕ್ ಆಕ್ಷೇಪಿಸಿದಾಗ ಆತ ಕಿರಿಕಿರಿ ಮಾಡಿರುವ ಕುರಿತು ಪರಿಚಯಸ್ಥ ವಿಜಯ್ ಕಲ್ಲಕ್, ಪತ್ರಕರ್ತ ಪೃಥ್ವಿರಾಜ್‌ ಅವರಿಗೆ ತಿಳಿಸಿದಾಗ ಪೃಥ್ವಿರಾಜ್ ಅವರು ವಿಜಯ್ ಕಲ್ಲಕ್, ಸಮಾಜದ ಅಂಬರೀಷ್ ಮತ್ತಿಮೂಡಕರ್, ಬಸವರಾಜ್ ಮುಡಬೂಳಕರ್, ಕುಶಾಲ್ ನಾಟೀಕಾರ್, ಶಿವಕುಮಾರ್ ಅರಬೋಳ್, ಕಾರ್ತಿಕ್ ಕಲ್ಲಕ್ ಅವರೊಂದಿಗೆ ಸೇರಿ ಐ.ಬಿ ಗೋಪಾಲ್ ಲಾಡ್ಜ್‌ಗೆ ಹೋಗಿದ್ದು, ಅಂಬೇಡ್ಕರ್ ಅವರ ಅವಹೇಳನ ಮಾಡಿದ ವ್ಯಕ್ತಿಗೆ ಕೇಳಿದಾಗ ಆತ ತಡಪಡಿಸಿದ. ಆತನ ವಾಟ್ಸಪ್ ನೋಡಿದಾಗ ಅವಹೇಳನ ಮಾಡಿದ್ದು ದೃಢಪಟ್ಟಿತು ಎಂದು ಅವರು ದೂರು ಸಲ್ಲಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ‌ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!