ಬೆಳೆ ಸಮೀಕ್ಷೆಯೇ ಮುಗಿದಿಲ್ಲ ಅಧಿಕಾರಿಗಳ ಸಭೆ ಕರೆದಿರುವುದು ಯಾವ ಪುರುಷಾರ್ಥಕ್ಕೆ ಶಾಸಕ ಮತ್ತಿಮುಡ್ ಅವರಿಗೆ ಅಫಜಲಪುರಕರ್ ಪ್ರಶ್ನೆ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡ್ ಅವರಿಗೆ ರಾತೋ ರಾತ್ರಿ ರೈತರ ಬಗ್ಗೆ ಜ್ಞಾನೋದಯವಾಯಿತಾ, ಒಮ್ಮೆಲೆ ರೈತರ ಬಗ್ಗೆ ಕಾಳಜಿವಹಿಸಿ, ಗ್ರಾಮೀಣ ಭಾಗದ ಕೃಷಿ ಅಧಿಕಾರಿಗಳ ಸಭೆ ನಡಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಇನ್ನು ಸಮೀಕ್ಷೆಯೆ ಪೂರ್ಣಗೊಂಡಿಲ್ಲಾ ಸಭೆ ಕರೆದಿರುವುದು ಯಾವ ಪುರುಷಾರ್ಥಕ್ಕೆ ಎಂದು ಚಿತ್ತಾಪುರ ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಜಿ. ಅಫಜಲಪುರಕರ್ ಪ್ರಶ್ನಿಸಿದ್ದಾರೆ.
ಇಷ್ಟೊಂದು ರೈತರ ಬಗ್ಗೆ ಕಾಳಜಿ ಬರಲು ಕಾರಣವೇನು? ಇದೆ ಕಾಳಿಜಿ ಬೆಳೆ ಕಟಾವಿಗೆ ಬಂದು ರಾಶಿ ಮಾಡುವ ಹಂತದಲ್ಲಿ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗಿ ರೈತರಿಗೆ ಕೈ ಬಂದಂತಹ ಬೆಳೆ ನೆಟೆ ರೋಗಕ್ಕೆ ತುತ್ತಾಯಿತು. ಆಗ ರೈತರು ದಿಕ್ಕುತೋಚದಂತಾಗಿ ಬಿದಿಗಿಳಿದು ಹೋರಾಟಕ್ಕೆ ನಿಂತರು, ಆಗ ಎಲ್ಲಿ ಹೋಗಿತ್ತು ನಿಮ್ಮ ರೈತರ ಬಗ್ಗೆ ಕಾಳಜಿ, ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ನಿಮ್ಮದೇ ಸರಕಾರವಿತ್ತು ಆಗ ರೈತರ ಬಗ್ಗೆ ಎಳ್ಳು ಕಾಳಷ್ಟು ಕಾಳಜಿ ತೊರಲಿಲ್ಲ, ಆಗ ರೈತರ ಬೆಂಬಲಕ್ಕೆ ನಿಂತ ಏಕೈಕ ನಾಯಕ ಪ್ರಿಯಾಂಕ್ ಖರ್ಗೆ ಕೊನೆಯವರೆಗೂ ರೈತರ ಪರ ಹೋರಾಡಿ ರೈತರಿಗೆ ಸರಕಾರದಿಂದ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾದರು ಎಂದು ತಿಳಿಸಿದ್ದಾರೆ.
ಈಗ ಎಲ್ಲಿಂದ ಬಂತು ನಿಮಗೆ ರೈತರ ಬಗ್ಗೆ ಕಾಳಜಿ ಕಮಲಾಪೂರದ ಹೊಬಳ್ಳಿಯ ರೈತ ಕಷ್ಟ ಪಟ್ಟು ಈರುಳ್ಳಿ ಬೆಳೆ ಬೆಳೆದ ರೈತನಿಗೆ ತಮ್ಮಿಂದ ಈರುಳ್ಳಿ ಘಟಕ ಕೊಡಿಸಲಾಗದ ಶಾಸಕರು ತಾವು, ಇದೆಯಾ ರೈತರ ಬಗ್ಗೆ ಇರುವ ಕಾಳಜಿ ಈಗಲಾದರೂ ಎಚ್ಚೆತ್ತುಕೊಂಡು ರೈತರ ಬಗ್ಗೆ ಕಾಳಜಿ ವಹಿಸಿ ಎಂದು ಕಿವಿಮಾತು ಹೇಳಿದ್ದಾರೆ.