ಭಾಗೋಡಿ ಅಂಗನವಾಡಿ ಕೇಂದ್ರದ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಭಾಗೋಡಿ ಗ್ರಾಮದ ಅಂಗನವಾಡಿ ಕೇಂದ್ರ-3ರ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ ಎಂದು ಗ್ರಾಮದ ಮುಖಂಡ ಬಸವರಾಜ ಪಾಟೀಲ ದಳಪತಿ ಮಾಹಿತಿ ನೀಡಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇರದ ಕಾರಣ ಪ್ರೌಢಶಾಲೆಯಲ್ಲಿನ ಒಂದು ಕೋಣೆ ಅಂಗನವಾಡಿಗೆ ನೀಡಲಾಗಿತ್ತು. ಬೆಳಗ್ಗೆ ನೋಡಿದಾಗ ಬಾಗಿಲು ಮುರಿದ ಸ್ಥಿತಿಯಲ್ಲಿತ್ತು ಕೊಡಲೇ 112ಗೆ ಕರೆ ಮಾಡಿದಾಗ ಪೊಲೀಸ್ ಬಂದು ಪರಿಶೀಲಿಸಿ ಠಾಣೆಗೆ ಕೇಸ್ ನೀಡಲು ಕೇಂದ್ರದ ಕಾರ್ಯಕರ್ತೆಗೆ ತಿಳಿಸಿದರು ಆದ್ರೆ ಕಾರ್ಯಕರ್ತೆ  ಸುಧಾರಾಣಿ ರಾಜು ಪಟ್ಟಣಕರ್ ಕೇಸ್ ನೀಡಲು ಬೇಡಾ ಯಾವುದೇ ಕಳು ಆಗಿಲ್ಲ ಅನ್ನುತ್ತಿದ್ದಾರೆ.

ಪ್ರೌಢಶಾಲೆಯಲ್ಲಿ ಕಂಪ್ಯುಟರ್ ಗಳು ಇದ್ದು ಮುಂದೆ ಕಳ್ಳತನ ಆಗುವ ಸಂಭವವಿದೆ ಹೀಗಾಗಿ ಅಧಿಕಾರಿಗಳು ಕೊಡಲೆ ಎಚ್ಚೆತ್ತುಕೊಂಡು ಸ್ಥಳಕ್ಕೆ ಬಂದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಸವರಾಜ ಪಾಟೀಲ ದಳಪತಿ ಆಗ್ರಹಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!