Oplus_131072

ಜು.25 ರಂದು ಭಾಗೋಡಿ ಯುವ ಕೃಷಿ ವೈಭವ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಭಾಗೋಡಿ ಗ್ರಾಮದ  ಶ್ರೀ ಶಾಂತಲಿಂಗೇಶ್ವರ ಮಠದಲ್ಲಿ ಯುವ ಕೃಷಿ ವೈಭವ ವತಿಯಿಂದ ಜು.25 ರಂದು ಬೆಳಗ್ಗೆ 11 ಗಂಟೆಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ರಾಯಚೂರ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಶ್ರೀ ಮಹಾಂತಗೌಡ.ಎಸ್.ಪಾಟೀಲ್ ಘನ ಉಪಸ್ಥಿತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸದಸ್ಯ ದೇವಿಂದ್ರ ಅರಣಕಲ್ ತಿಳಿಸಿದ್ದಾರೆ.

ಗುರುಮಿಠಕಲ್-ಭಾಗೋಡಿ ಖಾಸಾಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು, ಉದ್ಘಾಟಕರಾಗಿ ಕಲಬುರಗಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಶಿವಶರಣಪ್ಪ,ಬಿ.ಗೌಡಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ.ಎಸ್.ಪಾಟೀಲ ಅಧ್ಯಕ್ಷತೆ ವಹಿಸುವರು .

ಮುಖ್ಯ ಅತಿಥಿಗಳಾಗಿ ತಾಪಂ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರು ರವೀಂದ್ರಎಸ್.ಶಿಕಾರಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಓಂಕಾರ ಪಸಾರ, ಉದ್ಯಮಿ ಹಾಗೂ ಪ್ರಗತಿಪರ ರೈತ ಚಿಂತನಪಾಟ ವೆಂಕಟ ನರಸಿಂಹರಾಜು, ಗ್ರಾಮ ಪಂಚಾಯತ ಸದಸ್ಯರಾದ ಮುತ್ತಣ್ಣ ಶಿರೂರ, ಜುಲೈಕಾರ ಖಾಜಿ, ಲೀಲಾವತಿ ಮಲ್ಲಿಕಾರ್ಜುನ ಕುದರಿ, ಜಗದೇವಿ ಚಂದ್ರಶಾ ನಾಟೀಕಾರ, ಚಂದ್ರಕಲಾ ದೇವಪ್ಪ ಹಾಸಬಾ, ಸಂಗೀತಾ ದೇವಪ್ಪ ಶೇರಿ ಭಾಗವಹಿಸಲಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!