ಭಂಕೂರ ಗ್ರಾಮದಲ್ಲಿ ಅಂಬೇಡ್ಕರ ಜಯಂತಿ ಆಚರಣೆ

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ತಾಲೂಕಿನ ಭಂಕೂರ ಗ್ರಾಮದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ರವರ 134ನೇ ಜಯಂತಿಯನ್ನು ಆಚರಿಸಲಾಯಿತು.

ಗ್ರಾ. ಪಂ ಅಧ್ಯಕ್ಷ ಶರಣಬಸಪ್ಪ ಧನ್ನಾ ಮತ್ತು ಜಯಂತ್ಯೋತ್ಸವ ಸಮಿತಿ ಗೌರವಾಧ್ಯಕ್ಷ ಸುರೇಶ ಮೆಂಗನ್ ರವರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಪಿಡಿಒ ಮಹಾದೇವ ದಾಮಾ ಮತ್ತು ಮೌಲಾನಾ ಶಬ್ಬೀರ ಪಟೇಲ, ಮಲ್ಲಿಕಾರ್ಜುನ ಸಿರಗೊಂಡ ಮಾತನಾಡಿದರು.

ಮುಖಂಡರಾದ ಭರತ ಧನ್ನಾ, ಭೀಮಯ್ಯ ಗುತ್ತೇದಾರ, ಶಂಕರ ಜಾನಾ, ಗ್ರಾ. ಪಂ ಸದಸ್ಯರಾದ ಶಿವಯೋಗಿ ಬಣ್ಣೇಕರ, ಮಹ್ಮದ ಜಾಕೀರ, ಶಕೀಲ ಪಟೇಲ, ಮಲ್ಲಿಕಾರ್ಜುನ ಧರಿ, ಗಂಗಾರಾಮ ರಾಠೋಡ, ಯಶ್ವಂತ ಚವ್ಹಾಣ, ವೀಣಾ ಯಲಗೋಡ, ಪ್ರದೀಪ ಸರಡಗಿ, ತೇಜಸ್ ಧನ್ನಾ, ಸಿದ್ದಲಿಂಗ ಸಿರಗೊಂಡ, ಧನಲಕ್ಷ್ಮಿ ಗುಜ್ಜನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಹಾಬಾದ್ ವರದಿ- ನಾಗರಾಜ್ ದಂಡಾವತಿ.

Spread the love

Leave a Reply

Your email address will not be published. Required fields are marked *

You missed

error: Content is protected !!