ಕಲಬುರಗಿ ಕೆಮಿಸ್ಟ್ 99 ಟ್ರಸ್ಟ್ ಅಧ್ಯಕ್ಷರಾಗಿ ಸಯ್ಯದ್ ನಿಜಾಮುದ್ದಿನ್ ಚಿಸ್ತಿ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಆಸಿಫ್ ಮೆಡಿಕಲ್ ಮಾಲೀಕರಾದ ಸಯ್ಯದ್ ನಿಜಾಮುದ್ದಿನ್ ಚಿಸ್ತಿ ಅವರು ಕೆಮಿಸ್ಟ್ 99 (C99) ಎಜುಕೇಶನಲ್ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಲಬುರಗಿ ಸಂಸ್ಥೆಯ ಅಧ್ಯಕ್ಷರಾಗಿ 2025–2028 ಅವಧಿಗೆ ಆಯ್ಕೆಯಾಗಿದ್ದಾರೆ.
ಚಿಸ್ತಿ ಅವರು ಸಮಾಜ ಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅವರ ದೀರ್ಘಕಾಲದ ಸೇವೆಗಾಗಿ ಅವರು ಸಮುದಾಯದ ವಿವಿಧ ಕ್ಷೇತ್ರಗಳಿಂದ ಪ್ರಶಂಸೆ ಗಳಿಸಿದ್ದಾರೆ. ಈ ಸಾಧನೆಗೆ ಗೌರವವಾಗಿ ಇರ್ಫಾನ್ ನಾಲವಾರ ಕಿರಾಣಿ, ಮಹ್ಮದ್ ವಾಸೀಮ್ ಖಾನ್, ರಾಕೇಶ್ ಪವಾರ್, ಸಂದೀಪ್, ಅನುಪ್ ಉಬಾಳೆ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಮತ್ತು ಅವರ ಅಧ್ಯಕ್ಷತೆಯಲ್ಲಿ ಟ್ರಸ್ಟ್ ಇನ್ನೂ ಹೆಚ್ಚು ದುರ್ಬಲ ಮತ್ತು ಬಡವರ್ಗದ ಜನರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಶ್ರಮಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

