Oplus_0

ಚಿತ್ತಾಪುರ ದೇವಸ್ಥಾನದ ಆಭರಣಗಳು ಮತ್ತು ಹುಂಡಿ ಕಳ್ಳತನ ಮಾಡಿದ ಆರೋಪಿ ಬಂಧನ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪೊಲೀಸ್ ಠಾಣಾ ವ್ಯಾಪ್ತಿಯ ಬಹಾರಪೇಠ ತಾಂಡಾ ಹಾಗು ಆಲೂರ ಗ್ರಾಮದಲ್ಲಿ ನವೆಂಬರ್ 31 ರಂದು ಹಾಗು ಡಿಸೆಂಬರ್ 8 ರಂದು ರಾತ್ರಿ ಸಮಯದಲ್ಲಿ ಸೇವಾಲಾಲ್ ದೇವಸ್ಥಾನ, ಚೌಡಮ್ಮ ಗುಡಿಯಲ್ಲಿನ ಬೆಳ್ಳಿ, ಬಂಗಾರ, ಹುಂಡಿಯಲ್ಲಿನ ಹಣವನ್ನು ಕಳ್ಳತನ ಮಾಡಿದ ಬಾಹರಪೇಟದ ಬೀರಪ್ಪ ಈರಪ್ಪ ಪೂಜಾರಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಿಎಸ್ಐ ಶ್ರೀಶೈಲ್ ಅಂಬಾಟಿ ತಿಳಿಸಿದ್ದಾರೆ.

ಕಳ್ಳತನವಾದ ಬಗ್ಗೆ ಪಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ಚಿತ್ತಾಪುರ ಠಾಣೆಯಲ್ಲಿ 160/2024, 161/2024 50 331(4),305(2) 2 2 2 ದಾಖಲಾಗಿರುತ್ತವೆ. ಸದರಿ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿ ಪತ್ತೆ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡೂರು ಶ್ರೀನಿವಾಸಲು, ಅಪರ ಪೊಲೀಸ ಅಧೀಕ್ಷಕ ಎನ್. ಶ್ರೀನಿಧಿ, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡಿ ರವರ ಮಾರ್ಗದರ್ಶನದಲ್ಲಿ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಚಂದ್ರಮಪ್ಪ ಹಾಗೂ ಸಿಬ್ಬಂದಿಗಳಾದ ಬಸವರಾಜ ಹೆಚ್ ಸಿ, ಸವಿಕುಮಾರ ಸಿಪಿಸಿ, ರವಿಕುಮಾರ ಸಿಪಿಸಿ, ಸಿದ್ದರಾಮೇಶ ಸಿಪಿಸಿ, ಈರೇಶ ಸಿಪಿಸಿ, ಮಂಜುನಾಥ ಸಿಪಿಸಿ ರವರನ್ನೊಳಗೊಂಡ ತಂಡವನ್ನು ರಚಿಸಿ ಡಿಸೆಂಬರ್ 12 ರಂದು ಪ್ರಕರಣದಲ್ಲಿ ಆರೋಪಿ ಮತ್ತು ಮುದ್ದೆಮಾಲು ಪತ್ತೆ ಕಾರ್ಯದಲ್ಲಿದ್ದಾಗ ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಸದರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಲಕುಂಷವಾಗಿ ವಿಚಾರಣೆ ಮಾಡಲಾಗಿ ಆರೋಪಿತನಾದ ಬೀರಪ್ಪ ಈರಪ್ಪ ಪೂಜಾರಿ (35) ಬಹಾರಪೇಠ ಚಿತ್ತಾಪುರ ಇತನು ಚಿತ್ತಾಪುರ ಠಾಣಾ ವ್ಯಾಪ್ತಿಯಲ್ಲಿನ ಎರಡು ಪ್ರಕರಣಗಳಲ್ಲಿ ಹಾಗೂ ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಸಪ್ಪನ ಖಣಿ ಸೇವಲಾಲ್ ಗುಡಿಯಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಒಟ್ಟು 1,80,500 ರೂ ಬಂಗಾರ, ಬೆಳ್ಳಿ ಆಭರಣಗಳು ಹಾಗು ನಗದು ಹಣವನ್ನು ಜಪ್ತಿಪಡಿಸಿಕೊಂಡು ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದರಿ ಪ್ರಕರಣವನ್ನು ಪತ್ತೆ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಮೇಲಾಧಿಕಾರಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!