ಚಿತ್ತಾಪುರ ಡಿಎಸ್ಎಸ್ ತಾಲೂಕು ಅಧ್ಯಕ್ಷರಾಗಿ ಅಮಲಯ್ಯ ಚೂರಿ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾ ಸಾಹೇಬ್ ಡಾ. ಎನ್. ಮೂರ್ತಿ ಸ್ಥಾಪಿತ) ತಾಲೂಕು ಸಮಿತಿ ಅಧ್ಯಕ್ಷರಾಗಿ ಅಮಲಯ್ಯ ಬಿ. ಚೂರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಲಬುರ್ಗಿ ಜಿಲ್ಲಾ ಸಮಿತಿ ಅಧ್ಯಕ್ಷ ಜಗನ್ನಾಥ ಎಸ್ ಬೀಜನಳ್ಳಿಕರ್ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಚಿತ್ತಾಪುರ ಪಟ್ಟಣದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸರ್ವ ಸದಸ್ಯರ ಸಭೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಅಮಲಯ್ಯ ಬಿ. ಚೂರಿ ಅವರನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ನರಸಪ್ಪ ಎಂ.ಹೊಸಮನಿ, ಕಾರ್ಯದರ್ಶಿ ರಾಜು ಗುತ್ತೇದಾರ, ಸಹಕಾರ್ಯದರ್ಶಿ ನಾಗಣ್ಣ ಮಹಾಮನಿ, ಸಂಘಟನಾ ಕಾರ್ಯದರ್ಶಿ ಮಲ್ಲು ಕೊಲ್ಲೂರು, ಖಜಾಂಚಿ ದಿನೇಶ್ ಸೂಗೂರ ಎನ್, ಸದಸ್ಯರಾಗಿ ಮರೇಪ್ಪ ಅಲ್ಲೂರು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.