ಕಾಲ್ತುಳಿತ ಅನಾಹುತ ಕುರಿತು ನ್ಯಾಯಾಂಗ ತನಿಖೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಕಾಲ್ತುಳಿತದ ಸಾವು ಸಂಭವಿಸಿದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರ್’ಸಿಬಿ ಗೆಲುವಿನ ಹಿನ್ನೆಲೆಯಲ್ಲಿ ಮಂಗಳವಾರ ಜನರು ರಸ್ತೆಯಲ್ಲೇ ವಿಜೃಂಭಣೆ ಆಚರಿಸಿದ್ದಾರೆ. ಮರುದಿನ ಜನರ ಪ್ರತಿಕ್ರಿಯೆ ಕುರಿತು ಸರಕಾರಕ್ಕೆ ಪ್ರಜ್ಞೆ ಇರಬೇಕಿತ್ತು ಎಂದು ಆಕ್ಷೇಪಿಸಿದರು. ಕಾಲ್ತುಳಿತದ ಅನಾಹುತ ನಡೆದಿದೆ. ಇದರ ಜವಾಬ್ದಾರಿಯನ್ನು ಸರಕಾರವೇ ಹೊರಬೇಕು ಎಂದು ಒತ್ತಾಯಿಸಿದರು.
ಇದು ರಾಜಕೀಯ ಅಲ್ಲ ಜೀವಗಳ ಪ್ರಶ್ನೆ ಇದೆ. ಜೀವಗಳಿಗೆ ಬೆಲೆ ಇದೆ. ಆ ಜೀವಗಳನ್ನು ಉಳಿಸಬೇಕಾದ ಸರ್ಕಾರ ಇವತ್ತು ಜೀವ ಹೋಗಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

