ಚಿತ್ತಾಪುರ ಗೃಹರಕ್ಷಕ ದಳದ ಘಟಕ ಅಧಿಕಾರಿಯಾಗಿ ನಾಗೇಶ್ ಲಬಕಾ ಅಧಿಕಾರ ಪದಗ್ರಹಣ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಗೃಹರಕ್ಷಕ ದಳದ ಕಚೇರಿಯಲ್ಲಿ ಗೃಹರಕ್ಷಕ ದಳದ ಘಟಕ ಅಧಿಕಾರಿಯಾಗಿ ನೇಮಕವಾದ ನಾಗೇಶ್ ಲಬಕಾ ಅಧಿಕಾರ ಪದಗ್ರಹಣ ಹಾಗೂ ಘಟಕ ಅಧಿಕಾರಿಯಾಗಿ ವಯೋ ನಿವೃತ್ತಿಗೊಂಡ ಶೇಕ್ ಮೃಮುದ್ ಪುಲಾರಿ ಅವರ ಬಿಳ್ಕೊಡುಗೆ ಸಮಾರಂಭ ಶುಕ್ರವಾರ ನಡೆಯಿತು.
ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳಾದ ಸಿದ್ದಲಿಂಗಪ್ಪ ಭೋವಿ, ಸತ್ಯಾ ನಾರಾಯಣ, ರಮೇಶ್, ವಾಹೀದ್ ದಂಡೋತಿ, ಜಗನ್ನಾಥ, ನಾರಾಯಣ, ರಾಮಕೃಷ್ಣ ಕಾಂಬಳೆ, ಅಬ್ದುಲ್ ಸತ್ತಾರ್, ರಜಾಕ್, ಮೀನೇಶ್, ಶಶಿಕುಮಾರ್, ಗುರು ನಂಜಯ್ಯ, ಕುಮಾರ್ ಸೇರಿದಂತೆ ಇತರರು ಇದ್ದರು.