Oplus_131072

ಚಿತ್ತಾಪುರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ವೀರಭದ್ರಪ್ಪ ಗುರುಮಿಠಕಲ್ ನಾಮನಿರ್ದೇಶನ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾಗಿದ್ದ ವೀರೇಂದ್ರಕುಮಾರ ಕೊಲ್ಲೂರ ಅವರು ಸ್ವಯಂಪ್ರೇರಿತರಾಗಿ ರಾಜಿನಾಮೆ ನೀಡಿರುವ ಕಾರಣ ಅವರ ಸ್ಥಾನಕ್ಕೆ ವೀರಭದ್ರಪ್ಪ ಗುರುಮಿಠಕಲ್ ಅವರನ್ನು ನಾಮನಿರ್ದೇಶನ ಅನುಮೋದನೆ ಕೋರಿ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಕೇಂದ್ರ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿದಂತೆ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಜು.30 ರಂದು ಅನುಮೋದನೆ ನೀಡಿದ್ದಾರೆ.

ಅದೇ ರೀತಿ ಕಲಬುರಗಿ ತಾಲೂಕು ಕಸಾಪ ಘಟಕದ ಅಧ್ಯಕ್ಷರಾಗಿದ್ದ ಗುರುಬಸಪ್ಪ ಎಸ್. ಸಜ್ಜನಶೆಟ್ಟಿ ಅವರು ನಿಧನರಾಗಿರುವ ಕಾರಣ ಖಾಲಿಯಾದ ಅವರ ಸ್ಥಾನಕ್ಕೆ ಬದಲಿಯಾಗಿ ಶಿವಲೀಲಾ ಎಸ್. ಕಲಗುರ್ಕಿ ಅವರ ನಾಮನಿರ್ದೇಶನಕ್ಕೆ ಅನುಮೋದನೆ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!