Oplus_131072

ಚಿತ್ತಾಪುರ ಕೃಷಿ ಕಾರ್ಮಿಕನ ಪುತ್ರಿ ರಾಜ್ಯಕ್ಕೆ 20 ನೇ ರ್ಯಾಂಕ್, ಅಂಬಿಕಾ ಪಿಯು ಕಾಲೇಜಿನ ಕೀರ್ತಿ ಹೆಚ್ಚಿಸಿದ ನಾಗವೇಣಿಗೆ ಉಪನ್ಯಾಸಕರಿಂದ ಸನ್ಮಾನ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ಯರಗಲ್ ಗ್ರಾಮದ ಕೃಷಿ ಕಾರ್ಮಿಕ ಶ್ಯಾಮರಾವ್ ಅವರ ಪುತ್ರಿ ನಾಗವೇಣಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಕ್ಕೆ 573 ಅಂಕ ಗಳಿಸಿ ಶೇ. 95 ಫಲಿತಾಂಶ ಪಡೆದು ರಾಜ್ಯಕ್ಕೆ 20 ನೇ ರ್ಯಾಂಕ್ ಪಡೆದು ಕಾಲೇಜಿನ ಮತ್ತು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾಳೆ ಎಂದು ಅಂಬಿಕಾ ಪಿಯು ಕಾಲೇಜಿನ ಅಧ್ಯಕ್ಷ ಶಿವಾರಾಜ್ ಮೇತ್ರಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಕೆನರಾ ಬ್ಯಾಂಕ ಹತ್ತಿರ ಇರುವ ಅಂಬಿಕಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ತಾಲೂಕಿನ ಯರಗಲ್ ಗ್ರಾಮದ ಕೃಷಿ ಕಾರ್ಮಿಕ ಶ್ಯಾಮರಾವ್ ಅವರ ಮಗಳು ನಾಗವೇಣಿ ಬಡ ಕುಟುಂಬದಲ್ಲಿದ್ದುಕೊಂಡು ಪ್ರತಿದಿನ ಕಾಲೇಜಿನಲ್ಲಿ ಕಷ್ಟಪಟ್ಟು ಓದಿ ಶೇ. 95 ಪ್ರತಿಶತ ಅಂಕಗಳನ್ನು ಗಳಿಸಿ ರಾಜ್ಯಕ್ಕೆ 20ನೇ ರ್ಯಾಂಕ್ ಪಡೆದಿದ್ದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾಳೆ, ಅಲ್ಲದೆ ಪಾಲಕರ ಮತ್ತು ತಾಲೂಕಿನ ಕೀರ್ತಿ ಹೆಚ್ಚಿಸಿ ಇನ್ನಿತರ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಆಗಿದ್ದಾರೆ ವಿದ್ಯಾರ್ಥಿನಿಯ ಮುಂದಿನ ಭವಿಷ್ಯ ಉಜ್ವಲ ವಾಗಲಿ ಎಂದು ಹಾರೈಸಿದ್ದಾರೆ.

ಕಾಲೇಜಿನ ಪ್ರಾಚಾರ್ಯ ತಮ್ಮಣ್ಣ ಹೊನಗೇರಿ ಮಾತನಾಡಿ,  ಕಾಲೇಜಿನಲ್ಲಿ 63 ವಿದ್ಯಾರ್ಥಿನಿಯರ ಪೈಕಿ 6 ಅಗ್ರಶ್ರೇಣಿ, 34 ಪ್ರಥಮ ಸ್ಥಾನ, 7 ದ್ವಿತೀಯ ಸ್ಥಾನ, 1 ವಿದ್ಯಾರ್ಥಿನಿ ಗರಿಷ್ಠ ಅಂಕ ಪಡೆದಿದ್ದು ಕಾಲೇಜಿನ 83 ಪ್ರತಿಶತ ದಷ್ಟು ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದು, ಕಲಾ ವಿಭಾಗದಲ್ಲಿ ನಾಗವೇಣಿ 573 ಅಂಕ, ಮಮತಾ 538 ಅಂಕ, ಲಕ್ಷ್ಮಿ 522 ಅಂಕ, ಯಾಸ್ಮಿನ್ 515 ಅಂಕ, ಇಸೌರತ 509 ಅಂಕ, ದುರ್ಗಮ್ಮ 496 ಅಂಕ, ಮಲ್ಲಿಕಾ 496 ಅಂಕ, ಮಹಾಲಕ್ಷ್ಮಿ 493 ಅಂಕ, ಮಂಜುಳಾ 493 ಅಂಕ, ಸಿಮ್ರಾನ್ 493 ಅಂಕ ಪಡೆದಿದ್ದು ವಾಣಿಜ್ಯ ವಿಭಾಗದಲ್ಲಿ ಸಂಗೀತಾ 527 ಅಂಕ, ಪೂಜಾ 515 ಅಂಕ, ಭವಾನಿ 494 ಅಂಕ, ದೀಪಿಕಾ 486 ಅಂಕ, ಭಾಗ್ಯಶ್ರೀ 484 ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ದೇವಪ್ಪ ತಳವಾರ್, ಚೆನ್ನಪ್ಪ ಬಟಗೇರಿ, ಮಲ್ಲಿಕಾರ್ಜುನ ಡೋಣಗಾಂವ, ನಾಗರಾಜ ತಳವಾರ್, ಶ್ರೀಶೈಲ್ ಸಾತನೂರ, ಸಚಿನ್ ಬಟಗೇರಿ, ಅಶ್ವಿನಿ, ಪವಿತ್ರ, ಅನಿತಾ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!