Oplus_131072

ಮಳೆಗಾಗಿ ಭೋವಿ ಸಮಾಜದ ವತಿಯಿಂದ ಪ್ರಾರ್ಥನೆ, ನಂದಿ ಬಾವಿಯಲ್ಲಿ ತೆಪ್ಪ ಬಿಡುವ ಕಾರ್ಯಕ್ರಮ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಭೋವಿ ಸಮಾಜದ ವತಿಯಿಂದ ರೈತರ ಹಿತದೃಷ್ಟಿಯಿಂದ ಮಳೆಗಾಗಿ ಪ್ರಾರ್ಥಿಸಿ ಎಲ್ಲಾ ದೇವಾನುದೇವತೆಗಳಿಗೆ ನೀರು, ಕಾಯಿ ಕರ್ಪೂರದ ಆರತಿ ಮಾಡಿ ಇಲ್ಲಿನ ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಸ್ಥಾನದ ಹತ್ತಿರದ ನಂದಿ ಬಾವಿಯಲ್ಲಿ ಭೋವಿ ಸಮಾಜದ ಹಿರಿಯರು, ಮಹಿಳೆಯರು, ಯುವಕರು, ಮಕ್ಕಳು ಸೇರಿದಂತೆ ಇಡೀ ಭೋವಿ ಸಮಾಜದ ಎಲ್ಲಾ ಕುಟುಂಬದ ಸದಸ್ಯರು ಸೇರಿ ಮಂಗಳವಾರ ತೆಪ್ಪ ಬಿಡುವ ಕಾರ್ಯಕ್ರಮ ನಡೆಯಿತು.

ದೇಶದ ಬೆನ್ನೆಲುಬು ರೈತ, ರೈತರು ಚೆನ್ನಾಗಿ ಇದ್ದಾಗ ದೇಶವು ಸುಭದ್ರ ಸ್ಥಿತಿಯಲ್ಲಿ ಇರಲಿದೆ ಸಕಾಲಕ್ಕೆ ಉತ್ತಮ ಮಳೆ ಬಂದಾಗ ಬೆಳೆ ಕೂಡ ಉತ್ತಮ ಬರಲಿದೆ ಆದರೆ ಆಗಾಗ ಮಳೆ ಕೈಕೊಟ್ಟಾಗ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಹೀಗಾಗಿ ರೈತರ ಉತ್ತಮ ಮಳೆ ಬೆಳೆಗಾಗಿ ಭೋವಿ ಸಮಾಜದ ವತಿಯಿಂದ ಪ್ರತಿ ವರ್ಷ ನೀರುಣಿಸುವ ಹಾಗೂ ನಂದಿ ಬಾವಿಯಲ್ಲಿ ತೆಪ್ಪ ಬಿಡುವ ಕಾರ್ಯಕ್ರಮ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ನಗರ ಯುವ  ಅಧ್ಯಕ್ಷ ಲಕ್ಷ್ಮಿಕಾಂತ್ ತಾಂಡೂರಕರ್ ತಿಳಿಸಿದ್ದಾರೆ. ಈ ಕಾರ್ಯಕ್ರಮ ಮಾಡಿದ ನಂತರ ಮಳೆ ಬಂದೇ ಬರುತ್ತದೆ ಇದು ಸತ್ಯ ಕೂಡ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಭೋವಿ ಸಮಾಜದ ತಾಲೂಕು ಗೌರವಾಧ್ಯಕ್ಷ ಶಂಭು ಮರೆಪ್ಪ ಎದರಮನಿ, ತಾಲೂಕ ಅಧ್ಯಕ್ಷ ಸುರೇಶ ಅಳ್ಳೋಳ್ಳಿ, ಯುವ ಅಧ್ಯಕ್ಷ ತಾಯಪ್ಪ ತಾಂಡೂರಕರ್, ನಗರ ಯುವ ಅಧ್ಯಕ್ಷ ಲಕ್ಷ್ಮಿಕಾಂತ್ ತಾಂಡೂರಕರ್, ಶಂಭು ಪಾಸ್ಮಿ, ಶ್ರೀನಿವಾಸ್ ಮೇಟಿ, ಶಶಿ ಶಿವಪ್ಪ ಪಾಸ್ಮಿ, ಲಕ್ಷ್ಮಣ ಚಿಲಕನೂರ್, ಶರಣಪ್ಪ ತಾಂಡೂರಕರ್, ಮಲ್ಲಪ್ಪ ದುದ್ದಲಿಕರ್, ಮಲ್ಲಿಕಾರ್ಜುನ್, ಅಂಬರೀಶ್, ರಾಜೇಂದ್ರ ಕರದಳ್ಳಿ ದುದ್ದಲಿಕರ್, ದಶರಥ್ ಗಡ್ಡಿಮನಿ, ಶಶಿಕಾಂತ ದುದ್ದಲಿಕರ್, ಜಗದೀಶ್ ಚಿಲಕನೂರ್, ಚಂದಪ್ಪ ಮರೆಪ್ಪ ಎದರುಮನೆ ಸೇರಿದಂತೆ ಮಹಿಳೆಯರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!