ಚಿತ್ತಾಪುರ ಮಾನಸಿಕ ವಿಕಲಾಂಗ ಮಕ್ಕಳ 3 ತಿಂಗಳ ಮಾಸಾಶನ ಸ್ಥಗಿತ, ಸಂಕಷ್ಟದಲ್ಲಿ ಸಿಲುಕಿದ ಕುಟುಂಬ | ಸ್ಪಂದಿಸದ ಅಧಿಕಾರಿಗಳು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಖಾಜಿಪುರ ಏರಿಯಾದಲ್ಲಿರುವ ಖಾಜಿ ನಜೀಮೊದ್ದಿನ್ (ಅಂಜುಮ್) ಅವರ ಇಬ್ಬರ ಮಕ್ಕಳಿಗೆ ಕಳೆದ ಮೂರು ತಿಂಗಳಿಂದ ಮಾಸಾಶನ ಹಣ ಬರದೇ ಇರುವುದರಿಂದ ಮಕ್ಕಳ ಲಾಲನೆ ಪಾಲನೆ ತುಂಬಾ ಕಷ್ಟವಾಗಿದೆ, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಮಾಸಾಶನ ಮಂಜೂರು ಮಾಡುವ ಕಡೆ ಗಮನ ಹರಿಸಬೇಕಿದೆ.
ಖಾಜಿಪುರ ಏರಿಯಾದಲ್ಲಿರುವ ಖಾಜಿ ನಜಿಮೊದ್ದಿನ್ ಅವರು ಹಿಂದೆ ಪತ್ರಿಕಾ ವಿತರಕರಾಗಿ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈಗ ಅವರು ವಯಸ್ಸಾದ ಕಾರಣ ಪತ್ರಿಕಾ ವಿತರಕ ಕೆಲಸ ಬಿಟ್ಟು ಮನೆ ಹತ್ತಿರ ಸಣ್ಣ ಅಂಗಡಿಯನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಗೆ ಇಬ್ಬರು ಮಾನಸಿಕ ವಿಕಾಲಾಂಗ ಮಕ್ಕಳಿದ್ದು ಅವರು ಫ್ರೌಡಾವಸ್ಥೆಗೆ ಬಂದರೂ ಲೊಕಜ್ಞಾನ ಇಲ್ಲಾ ತಂದೆ-ತಾಯಿ ಊಟ ಮಾಡಿಸಿದರೆ ಮಾಡಬೇಕು ಇಲ್ಲದಿದ್ದರೆ ಉಪವಾಸ ಇರುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ಇವರಿಗೆ ಕೊರೊನಾ ಸಮಯದಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದಾರೆ.
ಕಡು ಬಡತನ ಕಿತ್ತು ತಿನ್ನುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇಬ್ಬರು ಮಾನಸಿಕ ವಿಕಲಾಂಗರಿಗೆ ಆರೈಕೆ ಮಾಡುವುದು ಕಷ್ಟವಾಗುತ್ತಿದೆ. ಅವರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ಮಾಸಾಶನ ಬರುತ್ತದೆ ಅದರಲ್ಲಿ ಅವರಿಗೆ ಊಟ, ವೈದ್ಯಕೀಯ ಖರ್ಚು ನಿಭಾಯಿಸಿಕೊಂಡು ಹೊಗುತ್ತಿದ್ದೆ ಆದರೆ ಕಳೆದ ಮೂರು ತಿಂಗಳಿಂದ ಮಾಸಾಶನ ಬರದ ಕಾರಣ ಅವರಿಗೆ ಮಾತ್ರೆಗಳು ಹಾಗೂ ಸಿರಾಫ್ ತರಲು ಹಣ ಇಲ್ಲದೇ ಇರುವುದರಿಂದ ತುಂಬಾ ತೊಂದರೆಯಲ್ಲಿ ಇದ್ದೇನೆ. ಇದರ ಮದ್ಯೆ ಅವರ ಆರೋಗ್ಯದಲ್ಲಿ ಏರು ಪೇರಾಗುತ್ತಿದೆ. ಹೀಗಾಗಿ ಮಾಸಾಶನಕ್ಕೆ ಅಲೆದಾಡಿದರೂ ಅದು ಬಂದಿರುವದಿಲ್ಲ ಎಂದು ಅಂಜುಮ್ ಖಾಜಿ ತಮ್ಮ ನೋವು ತೋಡಿಕೊಂಡಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಾನಸಿಕ ವಿಕಲಾಂಗ ಮಕ್ಕಳ ಮೂರು ತಿಂಗಳ ಮಾಸಾಶನ ಮಂಜೂರು ಮಾಡಿ ಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ನಾಗಾವಿ ಎಕ್ಸಪ್ರೆಸ್ ಮನವಿ ಮಾಡಿದೆ.

