ಚಿತ್ತಾಪುರ ಪೈಪ್ ಒಡೆದಿದ್ದರಿಂದ ನೀರಿನ ತೊಂದರೆ, ದುರಸ್ತಿ ಕಾರ್ಯ ಆಗುವವರೆಗೆ ಟ್ಯಾಂಕರ್ ನೀರು ಸರಬರಾಜು: ಚಂದ್ರಶೇಖರ ಕಾಶಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಅಂಬೇಡ್ಕರ್ ನಗರ, ಕಾಶಿ ಗಲ್ಲಿ ಮತ್ತು ಇಂದಿರಾ ನಗರಕ್ಕೆ ನೀರು ಸರಬರಾಜು ಆಗುವ ಪ್ರಮುಖ ಪೈಪ್ ಒಡೆದಿದ್ದು ಕಾರಣ ನೀರಿನ ತೊಂದರೆ ಉಂಟಾಗಿದೆ, ದುರಸ್ತಿ ಕಾರ್ಯ ಆಗುವವರೆಗೆ ಪುರಸಭೆ ವತಿಯಿಂದ ಟ್ಯಾಂಕರ್ ನೀರು ಸರಬರಾಜು ಮಾಡಲಾಗುವುದು ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಚಂದ್ರಶೇಖರ ಕಾಶಿ ಅವರು ನಾಗಾವಿ ಎಕ್ಸಪ್ರೆಸ್ ಗೆ ಉತ್ತರಿಸಿದ್ದಾರೆ.
ಒಡೆದ ಪೈಪ್ 30 ಫೀಟ್ ಆಳದಲ್ಲಿ ಇರುವುದರಿಂದ ಪೈಪ್ ಲೈನ್ ಸಿಗುತ್ತಿಲ್ಲ ಈಗಾಗಲೇ ಪೌರ ಕಾರ್ಮಿಕರು ಪತ್ತೆ ಕಾರ್ಯ ನಡೆಸಿದ್ದಾರೆ, ಪೈಪ್ ಸಿಗದೇ ಹೋದರೆ ಹೊಸ ಪೈಪ್ ಅಳವಡಿಸಿ ದುರಸ್ತಿ ಕಾರ್ಯ ಮಾಡಲಾಗುವುದು ಅಲ್ಲಿವರೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದ್ದಾರೆ.
ಈಚೇಗೆ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ಚರ್ಚೆ ಮಾಡಲಾಗಿತ್ತು, ಹೀಗಾಗಿ ಪೈಪ್ ದುರಸ್ತಿ ಕಾರ್ಯ ಬೇಗನೆ ಮುಗಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಪಟ್ಟಣದ ಎಪಿಎಂಸಿ ಹತ್ತಿರ ಮುಖ್ಯ ಪೈಪ್ ಒಡೆದಿದ್ದು ಪಟ್ಟಣದ ಹಲವು ಬಡಾವಣೆಗಳಿಗೆ ನೀರಿನ ತೊಂದರೆ ಉಂಟಾಗಿದ್ದು ದುರಸ್ತಿ ಕಾರ್ಯ ನಡೆದಿದ್ದು ನಾಳೆ ಸಂಜೆ ವರೆಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ತಿಳಿಸಿದ್ದಾರೆ.