ಚಿತ್ತಾಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸುವಂತೆ ಆಗ್ರಹಿಸಿ ಪುರಸಭೆ ಸದಸ್ಯರು ತಹಸೀಲ್ದಾರ್ ಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಉಚ್ಚ ನ್ಯಾಯಾಲಯ ಕಲಬುರ್ಗಿ ಪೀಠ ತೀರ್ಪಿನಂತೆ ಕೂಡಲೇ ಚಿತ್ತಾಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಪುರಸಭೆ ವಿರೋದ ಪಕ್ಷದ ನಾಯಕ ನಾಗರಾಜ ಭಂಕಲಗಿ, ಸದಸ್ಯರಾದ ರಮೇಶ ಬೊಮ್ಮನಳ್ಳಿ, ಶಾಮಣ್ಣ ಮೇಧಾ, ಸುಶೀಲಾ ದೇವಸುಂದರ, ಪ್ರಭು ಗಂಗಾಣಿ ಅವರು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಚಿತ್ತಾಪುರ ಪುರಸಭೆ ಅಧ್ಯಕ್ಷರ ಚುನಾವಣೆ ಕುರಿತು ಉಚ್ಛ ನ್ಯಾಯಾಲಯ ಕಲಬುರ್ಗಿ ಪೀಠದಲ್ಲಿ ಪ್ರಕರಣ ನಡೆದಿರುತ್ತದೆ. ಆದರೆ ಈಗ ಸದರಿ ಪ್ರಕರಣವನ್ನು ಇತ್ಯರ್ಥ ಮಾಡಿ ಅಧ್ಯಕ್ಷ ಚುನಾವಣೆ ನಡೆಸಲು ಆದೇಶಿಸಿದೆ. ಆದಕಾರಣ ಕೂಡಲೇ ಪುರಸಭೆ ಅಧ್ಯಕ್ಷ ಚುನಾವಣೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.