ಚಿತ್ತಾಪುರ ಸೇವಾಲಾಲ್ ಮಹಾರಾಜ ಜಯಂತಿ ಬಹು ವಿಜೃಂಭಣೆಯಿಂದ ಆಚರಿಸಲು ಬಂಜಾರ ಸಮಾಜ ನಿರ್ಧಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೇವಾಲಾಲ್ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಭೀಮಸಿಂಗ್ ಚವ್ಹಾಣ ಹಾಗೂ ಗೌರವಾಧ್ಯಕ್ಷ ಗೋಪಾಲ ರಾಥೋಡ ಅವರ ನೇತೃತ್ವದಲ್ಲಿ ನಡೆದ ಬಂಜಾರ ಸಮಾಜದ ಸಭೆಯಲ್ಲಿ ಬರುವ ಫೆಬ್ರುವರಿ 15 ರಂದು ಕರ್ನಾಟಕ ಸರ್ಕಾರದಿಂದ ಆಚರಿಸಲ್ಪಡುವ ಸಂತ ಸೇವಾಲಾಲ್ ಮಹಾರಾಜ ಜಯಂತಿಯನ್ನು ಬಹು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು.
ಜಯಂತಿಯ ರೂಪರೇಶವನ್ನು ಹೇಗೆ ಮಾಡಬೇಕು ಎಂದು ಚರ್ಚಿಸಲು ಫೆಬ್ರವರಿ 6 ರಂದು ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸೂಕ್ತ ಸಲಹೆ ಸೂಚನೆ ನೀಡಬೇಕು ಎಂದು ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಿಶನ್ ರೂಪಲಾ ನಾಯಕ, ಕಿರಣ್ ಭೀಮಾ ನಾಯಕ, ಕುಮಾರ ರಾಠೋಡ್ ಮೊಗಲಾ ನಾಯಕ, ಆಹಾರ ನಿಗಮ ಸದಸ್ಯ ರವಿ ಸೌಕಾರ್, ಪುರಸಭೆ ಸದಸ್ಯ ಜಗದೀಶ್ ಡಿ ಚವ್ಹಾಣ, ಸಮಾಜದ ಮಾಜಿ ಅಧ್ಯಕ್ಷ ರವಿ ರಾಠೋಡ, ಜಯಂತಿ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ ಚವ್ಹಾಣ ಯಾಗಾಪುರ, ಯಾಗಾಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮದನ್ ರಾಠೋಡ, ಗೋರ್ ಸಿಕವಾಡಿ ಅಧ್ಯಕ್ಷ ಮನೋಜ್ ರಾಠೋಡ, ಪ್ರವೀಣ್ ಪವಾರ, ರಾಕೇಶ್ ಪವಾರ, ಗೋಪಿ ರಾಠೋಡ, ಪಾಂಡು ರಾಠೋಡ, ರಾಮ್ ಚವ್ಹಾಣ, ರವಿ ಜಾಧವ, ಸುಭಾಷ್ ಜಾಧವ, ಸೇವಾಲಾಲ್ ದೇವಸ್ಥಾನ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ದೇವಿದಾಸ್ ಚವ್ಹಾಣ, ಶಿಕ್ಷಕ ವಿಶ್ವನಾಥ ರಾಠೋಡ, ಆರ್.ಟಿ.ಒ ಅಧಿಕಾರಿ ಹರೀಶ್ ರಾಠೋಡ, ಶಿಕ್ಷಕ ಜಗದೀಶ್ ಪವಾರ, ಸೇವಾಲಾಲ್ ಜಗಧಂಬಾ ದೇವಿ ದೇವಸ್ಥಾನ ಅಧ್ಯಕ್ಷ ಶ್ರೀಕಾಂತ್ ರಾಠೋಡ, ಆಕಾಶ್ ಚವ್ಹಾಣ, ಕುಮಾರ್ ರಾಠೋಡ್ ನಾಯಕ, ವಿಜಯ್ ಕುಮಾರ್ ಚವ್ಹಾಣ, ಗಣೇಶ್ ಚವ್ಹಾಣ, ಬಾಲರಾಜ್ ಚವ್ಹಾಣ, ವಿನೋದ್ ಪವಾರ, ದೀಪಕ್ ಜಾಧವ, ಸೀದು ರಾಠೋಡ, ಸಂತೋಷ ರಾಠೋಡ, ಅಂಬದಾಸ್ ರಾಠೋಡ, ವಿಕಾಸ್ ರಾಠೋಡ, ಅನಿಲ್ ಪವಾರ್, ಗೋಪಿ ಚವ್ಹಾಣ, ಸುಭಾಷ್ ರಾಠೋಡ, ಕಿಶು ರಾಠೋಡ, ಸುನಿಲ್ ಚವ್ಹಾಣ, ಗುರುನಾಥ ರಾಠೋಡ, ಅರ್ಜುನ್ ಚವ್ಹಾಣ, ಆಕಾಶ್ ಚವ್ಹಾಣ, ಕುಮಾರ್ ಚವ್ಹಾಣ, ಅಂಬದಾಸ್ ಚವ್ಹಾಣ, ಅವಿನಾಶ್ ಪವಾರ, ಸುರೇಶ ಚೋಕಿ, ಸಂಜು ರಾಠೋಡ, ನರೇಶ್ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.