ಚಿತ್ತಾಪುರ ಸ್ಕೂಪ್ಸ್ ವತಿಯಿಂದ ಬಸವ ವಚನೋತ್ಸವ ಹಾಗೂ ಆದರ್ಶ ಬಸವಶ್ರೀ ಪ್ರಶಸ್ತಿ ಪ್ರದಾನ, ಬಸವಣ್ಣನವರು ಸಮಾನತೆಯ ಹರಿಕಾರರು: ಮಲ್ಲಿಕಾರ್ಜುನ ಪಾಟೀಲ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿಶ್ವಗುರು, ಮಹಾನ್ ಮಾನವತಾವಾದಿ, ಭಕ್ತಿ ಭಂಡಾರಿ ಬಸವಣ್ಣನವರು ಸಮಾನತೆಯ ಹರಿಕಾರರಾಗಿದ್ದಾರೆ ಎಂದು ಕಲಬುರಗಿ ನಿವೃತ್ತ ಉಪನ್ಯಾಸಕ ಮಲ್ಲಿಕಾರ್ಜುನ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ಚಿತ್ತಾಪುರ ತಾಲೂಕು ಘಟಕದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವಗುರು, ಜಗಜ್ಯೋತಿ ಬಸವೇಶ್ವರ ರವರ 892ನೇ ಜನ್ಮದಿನೋತ್ಸವ ಅಂಗವಾಗಿ ಬಸವ ವಚನೋತ್ಸವ ಹಾಗೂ ಆದರ್ಶ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ವರ್ಗರಹಿತವಾದ ಸಮಾಜ ನಿರ್ಮಾಣಕ್ಕಾಗಿ 12 ನೇ ಶತಮಾನದಲ್ಲಿ ಅನುಭವ ಮಂಟಪ ನಿರ್ಮಿಸಿ ಎಲ್ಲರಿಗೂ ಅವಕಾಶ ಕಲ್ಪಿಸಿದ ಬಸವಣ್ಣನವರು ಕುಲಕೊಬ್ಬ ಶರಣರನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. ಸಮಾನತೆ ತತ್ವ, ಕಾಯಕ ತತ್ವ ಮತ್ತು ದಾಸೋಹ ತತ್ವಗಳ ಆಧಾರದ ಮೇಲೆ ಬಸವ ಧರ್ಮ ಹುಟ್ಟಿದೆ ಎಂದು ಹೇಳಿದರು.
ದಿಗ್ಗಾಂವ ಶ್ರೀ ಸಿದ್ದವೀರ ಶಿವಾಚಾರ್ಯರ ಸ್ವಾಮಿಗಳು ಮಾತನಾಡಿ, ಬಸವಣ್ಣನವರ ವಚನಗಳು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಪರಿವರ್ತನೆ ಕಾಣಬೇಕು ಎಂದು ಹೇಳಿದರು
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಬಸವಣ್ಣನವರ ಒಂದಾದರೂ ವಚನ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದರೆ ಜಯಂತಿ ಆಚರಣೆಗೆ ಸಾರ್ಥಕವಾಗಲಿದೆ ಎಂದು ಹೇಳಿದರು. ಜಗಜ್ಯೋತಿ ಬಸವೇಶ್ವರ ರವರ 892ನೇ ಜನ್ಮದಿನೋತ್ಸವ ಅಂಗವಾಗಿ ಬಸವ ವಚನೋತ್ಸವ ಹಾಗೂ ಆದರ್ಶ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿರುವ ಸ್ಕೂಪ್ಸ್ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅಮರೇಶ್ವರಿ ಬಿ. ಚಿಂಚನಸೂರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಚಿಂಚೋಳಿ ಕಸಾಪ ಅಧ್ಯಕ್ಷ ಸುರೇಶ್ ದೇಶಪಾಂಡೆ, ಶರಣು ಪಾಟೀಲ ಮೋತಕಪಳ್ಳಿ, ಪ್ರಜಾಪಿತ ಬೃಹ್ಮಕುಮಾರಿ ಈಶ್ವರ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ ಗಿರಿಜಾ ಅಕ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಬಿಸಿಯೂಟ ಅಧಿಕಾರಿ ಪ್ರಕಾಶ್ ನಾಯ್ಕೋಡಿ, ಜ್ಯೋತಿ ಸೇವಾ ಕೇಂದ್ರ ಟ್ರಸ್ಟ್ ವ್ಯವಸ್ಥಾಪಕಿ ಸಿಸ್ಟರ್ ಲೂಸಿ ಪ್ರಿಯ ಬಿ.ಎಸ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್, ಜಾಕೀರ್ ಹುಸೇನ್, ಜೈ ಹನುಮಾನ ಆಯಿಲ್ ಟ್ರೇಡರ್ಸ್ ಸಂಪತಕುಮಾರ ಸಜ್ಜನ್, ಮುಸ್ಲಿಂ ಸಮಾಜದ ಮುಖಂಡ ಮುಕ್ತಾರ ಪಟೇಲ್, ರಾಜ್ಯಾಧ್ಯಕ್ಷ ಗುರುಪಾದ ಕೋಗನೂರ, ಟಿಪಿಒ ಶಿವಶರಣಪ್ಪ ಮಂಠಾಳೆ, ಮನೋಹರ ಹಡಪದ, ದೇವಿಂದ್ರಪ್ಪ ದೊರೆ, ಮೊಹಮ್ಮದ್ ಯುಸುಫ್, ಸುಮಂಗಲಾ ಜಾಡರ್, ಗುಂಡಮ್ಮ, ಸಂತೋಷ ಶಿರನಾಳ, ಆನಂದ ಪಾಟೀಲ ನರಿಬೋಳ, ವೀರಸಂಗಪ್ಪ ಸುಲೇಗಾಂವ, ಮನೋಹರ್ ಹಡಪದ ಸೇರಿದಂತೆ ಇತರರು ಇದ್ದರು.
ತಾಲೂಕು ಮಟ್ಟದ ಆದರ್ಶ ಬಸವಶ್ರೀ ಪ್ರಶಸ್ತಿ ಪುರಸ್ಕೃತರು:
ಡಿಎಸ್ಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್, ಮುಸ್ಲಿಂ ಸಮಾಜದ ಮುಖಂಡ ಮುಕ್ತಾರ್ ಪಟೇಲ್, ಜ್ಯೋತಿ ಸೇವಾ ಕೇಂದ್ರದ ವ್ಯವಸ್ಥಾಪಕಿ ಸಿಸ್ಟರ್ ಲೂಸಿ ಪ್ರಿಯ ಬಿ.ಎಸ್, ಶ್ರೀ ಗಂಗಾಪರಮೇಶ್ವರಿ ಬಿ.ಎಡ್. ಕಾಲೇಜಿನ ಪ್ರಾಚಾರ್ಯ ಡಾ. ರಾಜಶೇಖರ ಜಿ.ಆರ್, ಚಿಂಚೋಳಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಪಾಲಾಮೂರ್, ಪತ್ರಕರ್ತ ವಿರೇಂದ್ರಕುಮಾರ ಕೊಲ್ಲೂರ, ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ, ಪತ್ರಕರ್ತ ಕಾಶಿನಾಥ ಗುತ್ತೇದಾರ, ವಾಡಿ ಗೀತಾ ಪಾಠಶಾಲೆಯ ಸಂಚಾಲಕ ಬಿ.ಕೆ. ಕಾಳಪ್ಪ ಬಡಿಗೇರ, ಎಸ್ಬಿಐ ವ್ಯವಸ್ಥಾಪಕ ನಟೇಶ ವಾಯ್.ಎಸ್, ಕರದಾಳ ಪಾರಂಪರಿಕ ಆರ್ಯುವೇದ ವೈದ್ಯ ವೇದಮೂರ್ತಿ ಶಿವಲಿಂಗಯ್ಯ ಸ್ವಾಮಿ ಮಠಪತಿ, ಸರಕಾರಿ ಐ.ಟಿ.ಐ ಕಾಲೇಜಿನ ಪ್ರಾಚಾರ್ಯ ತಾಜುದ್ದಿನ್ ಯರಗಲ್, ನಿವೃತ್ತ ಶಿಕ್ಷಕ ಮಲ್ಲಣ್ಣ ಮೂಡಬೂಳ, ಪತಂಜಲಿ ಯೋಗ ಸಮಿತಿಯ ವೀರಣ್ಣ ಮಹಾದೇವಪ್ಪ ಶಿಲ್ಪಿ, ಶ್ರೀವೈರಾಗ್ಯ ಶ್ರೀನಿಧಿ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ವೆಂಕಟಮ್ಮ ಮಹಾದೇವಪ್ಪ ಪಾಲಪ್, ಕಲಬುರಗಿ ಬಸವ ಬಳಗ ಜ್ಞಾನ ಸಂಪತ್ತು ವೇದಿಕೆಯ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಗುತ್ತೇದಾರ, ಬಿ.ಆರ್.ಸಿ ದೊಡ್ಡಬಸಮ್ಮ ಬಿ. ಶೆಟ್ಟರ್, ದಂಡೋತಿ ಅಂಗನವಾಡಿ ಮೇಲ್ವಿಚಾರಕಿ ಶೋಭಾ ಕೆ. ಶೆಟ್ಟಿ, ಎಸ್.ಬಿ. ಕಂಪ್ಯೂಟರ್ ಟ್ರೇನಿಂಗ್ ಸೆಂಟರ್ ಮುಖ್ಯಸ್ಥ ಸುಭಾಷ ಬೆನಕನಳ್ಳಿ, ಸಂಗೀತಗಾರ ಚನ್ನವೀರ ಅಮೃತಪ್ಪ ಬೆಳಗುಂಪಾ, ಹೊನಗುಂಟಾ ದೈಹಿಕ ಶಿಕ್ಷಕ ಹಣಮಂತರಾವ ಬಿರಾದಾರ, ಯನಗುಂಟೆ ಸಹ ಶಿಕ್ಷಕ ಮೈಲಾರಲಿಂಗ ಹೊನ್ನಾವರ್, ಚಿತ್ತಾಪರ ಶಿಕ್ಷಕ ಶರಣಪ್ಪ ಬಿರಾದಾರ, ಬಿಇಒ ಕಚೇರಿಯ ಗುರುಬಸಪ್ಪಾ, ಕ್ಷೇತ್ರ ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ಆರ್.ಸಿ. ಸಾಜೀದ್ ಖಾನ್, ರಾಜೋಳಾ ಶಿಕ್ಷಕ ತ್ರಿವಿಕ್ರಮ ಸುಧೀರ ಶೆಟ್ಟಿ, ಮೊಗಲಾ ಮುಖ್ಯ ಗುರು ಸುರೇಶ್ ಸರಾಫ್, ಚಿತ್ತಾಪುರ ಬಸ್ ಚಾಲಕ ಗೋಸಯ್ಯ ಸ್ವಾಮಿ ಬಸ್ ಚಾಲಕ, ಪೇಠ ಚಿತ್ತಾಪುರ ಶಿಕ್ಷಕಿ ಕು. ಪ್ರೇಮಲತಾ, ಅಳ್ಳೋಳ್ಳಿ ಆಶಾ ಕಾರ್ಯಕರ್ತೆ ಅನುಸುಯಾ, ಡೋಣಗಾಂವ ಅಂಗನವಾಡಿ ಕಾರ್ಯಕರ್ತೆ ಜಯಶ್ರೀ.
ತಾಲೂಕು ಅಧ್ಯಕ್ಷೆ ಜಯಶೀಲಾ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಧಾನ ಕಾರ್ಯದರ್ಶಿ ಮೌಲಾನ ಸಾಹೇಬ್ ಮಕಾಂದಾರ್ ಸ್ವಾಗತಿಸಿದರು, ಶ್ರೇಯಾ ಬೆಟಗೇರಿ ಪ್ರಾರ್ಥಿಸಿದರು, ಸಹ ಕಾರ್ಯದರ್ಶಿ ಶಿವಲೀಲಾ ಬೆಟಗೇರಿ ನಿರೂಪಿಸಿದರು.

