ಚಿತ್ತಾಪುರ ಸ್ಟೇಷನ್ ತಾಂಡಾದ 26ನೇ ವರ್ಷದ ನವರಾತ್ರಿ ಉತ್ಸವ ಯಶಸ್ವಿ | ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಸಾಧಕರಿಗೆ ಸತ್ಕಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದಲ್ಲಿ 26ನೇ ವರ್ಷದ ನವರಾತ್ರಿ ಉತ್ಸವ ಸಮಿತಿಯ ವತಿಯಿಂದ ಭಾನುವಾರ ರಾತ್ರಿ ಆಯೋಜಿಸಲಾದ ನವರಾತ್ರಿ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ಮತ್ತು ಯಶಸ್ವಿಯಾಗಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ತಾಯಂದಿರು, ಮಹಿಳೆಯರು, ಯುವಕರು, ಹಿರಿಯರು ಹಾಗೂ ಸಮಾಜದ ಗಣ್ಯರು ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಕಾವ್ಯ ಮೆಲೋಡೀಸ್ ತಂಡದ ವತಿಯಿಂದ ನಡೆದ ಸುಮಧುರ ರಸಮಂಜರಿ ಕಾರ್ಯಕ್ರಮವು ನೆರೆದಿದ್ದ ಜನರನ್ನು ರಂಜಿಸಿತು
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಸಾಧಕರಿಗೆ ಸತ್ಕಾರ :
ಬಂಜಾರ ಸಮಾಜದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ, ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಹಾಗೆಯೇ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಸತ್ಕರಿಸಲಾಯಿತು.
ಈ ಕಾರ್ಯಕ್ರಮದ ಮೂಲಕ ಶಿಕ್ಷಣದ ಮಹತ್ವವನ್ನು ಸಾರುವುದರ ಜೊತೆಗೆ, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ತರಿ ತಾಂಡಾದ ಶ್ರೀ ಡಾ.ಅನಿಲ್ ಮಹಾರಾಜ್, ಮಾಜಿ ಸಂಸದ ಡಾ.ಉಮೇಶ್ ಜಾಧವ, ಓರಿಯಂಟ್ ಸಿಮೆಂಟ್ನ ಪ್ರಮುಖ ಅಜಯ್ ಶರ್ಮಾ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್, ಕೆಎಎಸ್ ಅಧಿಕಾರಿ ಪವನ್ ಕುಮಾರ್ ರಾಠೋಡ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ್ ಚವ್ಹಾಣ, ಬಸವರಾಜ್ ಬೆಣ್ಣೂರಕರ್, ಓರಿಯಂಟ್ ಸಿಮೆಂಟ್ನ ಎಚ್ಆರ್ ವಿಭಾಗದ ಮುಖ್ಯಸ್ಥ ರೋಹಿತ್ ಜೋಶಿ, ಮುರಳಿ ಮೋಹನ್ ರಾಜು, ಭೀಮಸಿಂಗ್ ಚವ್ಹಾಣ, ಗೋಪಾಲ್ ರಾಠೋಡ, ಅನೀಸ್ ರಾಠೋಡ, ಮನೋಹರ್ ಚವ್ಹಾಣ, ತಿರುಪತಿ ಚವ್ಹಾಣ, ಶ್ರೀಕಾಂತ್ ರಾಠೋಡ, ವಿಶ್ವನಾಥ ರಾಠೋಡ, ಹರೀಶ ರಾಠೋಡ, ವಿಜಯಕುಮಾರ್ ಪವಾರ, ಹಾಗೂ ಸ್ಟೇಷನ್ ತಾಂಡಾದ ನಾಯಕರಾದ ಕಿಶನ್ ನಾಯಕ, ಕಿರಣ್ ನಾಯಕ, ಲಕ್ಷ್ಮಣ್ ವಿಠ್ಠಲ್ ನಾಯಕ, ಶಂಕರ್ ಬಾಬು ನಾಯಕ, ರವೀಂದ್ರ ನಾಯಕ, ಚಂದು ನಾಯಕ, ದೇವಿದಾಸ್ ನಾಯಕ, ಶಂಕರ ನಾಯಕ, ದೇವಿದಾಸ್ ಚವ್ಹಾಣ, ಶ್ರೀಕಾಂತ್ ರಾಠೋಡ, ರವಿ ರಾಠೋಡ ಸೌಕಾರ್ ಮಳಖೇಡ ರೈತ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
26 ವರ್ಷಗಳ ನಿರಂತರ ಸೇವೆ, ಸಮಾಜದ ಪ್ರಗತಿಯ ಸಂಕಲ್ಪ:
ನವರಾತ್ರಿ ಉತ್ಸವ ಸಮಿತಿಯು ಕಳೆದ 26 ವರ್ಷಗಳಿಂದ ನಿರಂತರವಾಗಿ ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಪಯಣ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗಿರದೆ, ಸಮಾಜದಲ್ಲಿ ಶಿಕ್ಷಣ, ಸಂಸ್ಕೃತಿ, ಏಕತೆ, ಪ್ರತಿಭೆ ಮತ್ತು ಸಾಮಾಜಿಕ ಜಾಗೃತಿಯ ಬೆಳಕನ್ನು ಹರಡುವ ಮಹತ್ವದ ವೇದಿಕೆಯಾಗಿದೆ.
ಸ್ಟೇಷನ್ ತಾಂಡಾದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಶಿಕ್ಷಣ ಪಡೆದು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅನೇಕರು ಉದ್ಯಮಿಗಳಾಗಿ ಬೆಳೆದಿದ್ದಾರೆ. ಇನ್ನೂ ಅನೇಕರು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದು, ಹಲವರು ಸರ್ಕಾರಿ ಅಧಿಕಾರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಾಧನೆಗಳು ನಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯಗಳಾಗಿವೆ ಎಂದು 26ನೇ ವರ್ಷದ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಜಗದೀಶ್ ಡಿ. ಚವ್ಹಾಣ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಬಂಜಾರಾ ಸಮಾಜವು ಪರಿಶ್ರಮಿ ಮತ್ತು ಕಾಯಕಯೋಗಿ ಸಮಾಜವಾಗಿದ್ದು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಬೇಕು ಎಂದು ಕರೆ ನೀಡಿದರು.
“ನವರಾತ್ರಿ ಉತ್ಸವದ ಜೊತೆಗೆ ಬಂಜಾರ ಸಮಾಜದ ಸಾಧಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ, ಇಂತಹ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಲಿ”.-ಡಾ.ಉಮೇಶ್ ಜಾಧವ್ ಮಾಜಿ ಸಂಸದರು ಕಲಬುರಗಿ
“ಚಿತ್ತಾಪುರದ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಪಾತ್ರ ಪ್ರಮುಖವಾಗಿದ್ದು, ಕಂಪನಿ ಮತ್ತು ಸ್ಥಳೀಯ ಜನರು ಪರಸ್ಪರ ಸಹಕಾರದೊಂದಿಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸೋಣ”.-ಅಜಯ್ ಶರ್ಮಾ ಓರಿಯೆಂಟ ಸಿಮೆಂಟ್ ಕಂಪೆನಿಯ ಅಧಿಕಾರಿ.

