ದಿ.ಶೋಭಾ ಕಾಶಿ 5 ನೇ ವರ್ಷದ ಪುಣ್ಯಸ್ಮರಣೆ, ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ | ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯ ಶ್ಲಾಘನೀಯ: ನಾಗರೆಡ್ಡಿ ಪಾಟೀಲ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಕ್ರೀಡಾಂಗಣದಲ್ಲಿ ಸದಾ ಒಂದಿಲ್ಲೊಂದು ಪಂದ್ಯಾವಳಿಗಳು ಹಾಗೂ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವ ಇಲ್ಲಿನ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯ ಶ್ಲಾಘನೀಯ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.
ಪಟ್ಟಣದ ಒಳಾಂಗಣ ಕ್ರೀಡಾಂಗಣದಲ್ಲಿ ತಾಲೂಕು ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ದಿ.ಶೋಭಾ ಸಿ.ಕಾಶಿ ಅವರ 5 ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಮುತುವರ್ಜಿ ವಹಿಸಿ ವಿವಿಧ ಕ್ರೀಡೆಗಳ ಪ್ರತ್ಯೇಕ ಮೈದಾನ ನಿರ್ಮಾಣ ಮಾಡಿದ್ದಾರೆ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸಹ ಒದಗಿಸಿದ್ದಾರೆ ಹೀಗಾಗಿ ಎಲ್ಲಾ ಕ್ರೀಡಾಪಟುಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಒಳ್ಳೆಯ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಆಗಿರುವುದು ಚಿತ್ತಾಪುರದಲ್ಲಿ, ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಇಚ್ಛಾಶಕ್ತಿ ಕಾರಣ. ಇಂತಹ ಭವ್ಯವಾದ ಕ್ರೀಡಾಂಗಣದ ರಕ್ಷಣೆ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು. ಕ್ರೀಡಾಂಗಣ ನಿರ್ಮಾಣದಿಂದ ತಾಲೂಕಿನಲ್ಲಿ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಾಗಿದೆ ಮಕ್ಕಳಲ್ಲಿ ಕ್ರೀಡಾಸಕ್ತಿ ಹೆಚ್ಚುತ್ತಿದೆ ಎಂದರು. ಕ್ರೀಡಾಪಟುಗಳನ್ನು ಸದಾ ಪ್ರೋತ್ಸಾಹಿಸುತ್ತಿರುವ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸೇವೆ ಮೆಚ್ಚುವಂಥದ್ದು ಎಂದು ಹೇಳಿದರು.
ಕಲಬುರಗಿ ಎಎಸ್ಪಿ ಮಹೇಶ್ ಮೇಘಣ್ಣವರ್, ಲಿಕ್ಕರ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಗುತ್ತೇದಾರ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್, ಪಿಎಸ್ಐ ಆನಂದ ಕಾಶಿ, ಯುವ ಉದ್ಯಮಿ ಸಂತೋಷ್ ಕಾಶಿ, ಕ್ರೀಡಾಪಟು ಮೋಹನ್, ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಸಾಬಣ್ಣ ವೈ. ಕಾಶಿ, ಸಂತೋಷ ಕಲಾಲ್, ಲಖನ್ ರಜಪುತ್, ಶ್ರೀನಿವಾಸ ಪೇಂದು, ಚಂದ್ರಶೇಖರ ಉಟಗೂರ, ರಾಜಶೇಖರ್ ಬಳ್ಳಾ, ರೋಹಿತ್, ಖದೀರ್, ವಿಜಯಕುಮಾರ್, ಅಲ್ಲಾವುದ್ದೀನ್, ಶಿವು ಶಿಲವಂತ, ಗಂಗಾಧರ್ ರೊಟ್ಟಿ, ಮಹೇಶ್ ಕಾಶಿ, ಗುರುಲಿಂಗಯ್ಯ ಸ್ವಾಮಿ, ಆಕಾಶ, ಹಮಿದ್, ಕೈಬ್, ಪವನ್, ರಾಜು ರಾಠೋಡ ಸೇರಿದಂತೆ ಇತರರು ಇದ್ದರು. ಬಾಬು ಕಾಶಿ ನಿರೂಪಿಸಿದರು.
“ಚಿತ್ತಾಪುರದಲ್ಲಿ ದಿ.ಶೋಭಾ ಸಿ.ಕಾಶಿ ಅವರ ಪುಣ್ಯಸ್ಮರಣೆ ನಿಮಿತ್ತ ಪ್ರತಿ ವರ್ಷ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಿ ಕ್ರೀಡಾಪಟುಗಳನ್ನು ಉತ್ತೇಜಿಸುವ ಕೆಲಸ ಮಾಡಲಾಗುತ್ತಿದೆ. ಈ ಬಾರಿ 68 ತಂಡಗಳು ಭಾಗವಹಿಸಿವೆ ಕ್ರೀಡಾಪಟುಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ”.- ಸಾಬಣ್ಣ ವೈ. ಕಾಶಿ, ಅಧ್ಯಕ್ಷರು ಬ್ಯಾಡ್ಮಿಂಟನ್ ಅಸೋಸಿಯೇಷನ್ ಚಿತ್ತಾಪುರ.

