ಗಡಿಕೇಶ್ವರ ಶಾಲೆಯಲ್ಲಿ ರಂಗನೂರ ಜನ್ಮದಿನದ ಪ್ರಯುಕ್ತ ಮಕ್ಕಳಿಗೆ ನೋಟ್ ಬುಕ್, ಪೆನ್ನು ವಿತರಣೆ
ನಾಗಾವಿ ಎಕ್ಸಪ್ರೆಸ್
ಚಿಂಚೋಳಿ: ತಾಲೂಕಿನ ಗಡಿಕೇಶ್ವರ ಗ್ರಾಮದ ಹೊಸ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ತ್ರಿಶಾಂಕ್ ಅಶೋಕ ರಂಗನೂರ ಇವರ 6ನೇ ಹುಟ್ಟುಹಬ್ಬದ ನಿಮಿತ್ತ 1 ರಿಂದ 5 ನೇ ತರಗತಿ ಮಕ್ಕಳಿಗೆ ನೋಟ್ ಬುಕ್, ಪೆನ್ನು ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಜಯಶ್ರೀ ಮತ್ತು ಎಸ್ಡಿಎಂಸಿ ಅಧ್ಯಕ್ಷ ಸಿದ್ದು ರಂಗನೂರ, ಗ್ರಾಮದ ಮುಖಂಡರಾದ ರಾಜಶೇಖರ್ ರೇಮಣಿ, ಶಿವು ಬಟಿಗೇರಿ, ದಯಾನಂದ ರಂಗನೂರ, ಬಸವರಾಜ ಮುದ್ದ, ಶಬ್ಬೀರಮಿಯ್ಯ, ಮಲ್ಲಿಕಾರ್ಜುನ ದೇಸಾಯಿ, ಚಂದ್ರು ಬಡಗನ, ಜಗ್ಗು ರಂಗನೂರ, ಗುಂಡಯ್ಯ ಗುತ್ತೇದಾರ, ದತ್ತು ಗುತ್ತೇದಾರ, ಹನುಮಂತರಾವ ಸಜ್ಜನ್, ಶರಣಪ್ಪ ಪೋಟೆ ಗಣಪತಿ ಬಡಗನ, ಬಸವರಾಜ್ ಗುಂಪರ್, ಸಲಾಂಪಾಶ ಅಯ್ಯೋಬ, ಮಾಣಿಕ್ ಎಡಗ, ಪ್ರಶಾಂತ, ಭೀಮರಾವ್ ಚಂದನ್, ಅಶೋಕ್ ಜೀ ರಂಗನೂರ, ಅರುಣ ಜಿ ರಂಗನೂರ್ ಸೇರಿದಂತೆ ಇತರರು ಇದ್ದರು.

