Oplus_0

ಚಿತ್ತಾಪುರ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆ ರಮೇಶ ಡಿ.ಸಿ ಆಗ್ರಹ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದ್ ಅಕ್ರಂ ಪಾಷಾ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಮೇಶ ಡಿ.ಸಿ ಆಗ್ರಹಿಸಿದ್ದಾರೆ

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಫಲಾನುಭವಿಗಳ ಮನೆಗಳಿಗೆ ಜಿಪಿಎಸ್ ಆಗಿ ಸುಮಾರು ಏಳು ಎಂಟು ತಿಂಗಳಾದರೂ ಎಫ್‌ಟಿಓ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದು ಮತ್ತು ಹಳ್ಳಿಗಳಲ್ಲಿ ಬಹಳಷ್ಟು ಕೂಲಿ ಕಾರ್ಮಿಕ ಜನರಿಗೆ ಜಾಬ್ ಕಾರ್ಡ್ ಇಲ್ಲದೆ ಪಂಚಾಯಿತಿಗೆ ಅಲೆದಾಡುತ್ತಿದ್ದು ಬೇಸರವಾಗಿ ಗೂಳೆ ಹೋಗುತ್ತಿರುತ್ತಾರೆ ಇದಕ್ಕೆಲ್ಲ ಇಓ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಬರಗಾಲವಿದ್ದುದರಿಂದ ಸರ್ಕಾರ ಹಳ್ಳಿ ಜನರಿಗೆ ಗೂಳೆ ಹೋಗಬಾರದೆಂದು ಜಾಬ್ ಕಾರ್ಡ್ ವಿತರಣೆ ಮಾಡಿ ಕೆಲಸ ಕೊಡಬೇಕಾಗಿ ಹೇಳಿದೆ, ಆದರೆ ತಾಲೂಕಿನ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದು ಆದಕಾರಣ ತಾಲೂಕಿನ ಅಧಿಕಾರಿ ಪಂಚಾಯಿತಿ ನಡೆಸಲು ಯೋಗ್ಯವಿರುವುದಿಲ್ಲ ಆದುದರಿಂದ ಇವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!