ಚಿತ್ತಾಪುರದಿಂದ ಕುಂಬಮೇಳ ಯಾತ್ರೆಗೆ ಚಾಲನೆ, ಪ್ರಯಾಗರಾಜ್ ಪವಿತ್ರ ತೀರ್ಥಸ್ಥಳ: ಕಂಬಳೇಶ್ವರ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಮುದ್ರ ಮಂಥನದ ಸಮಯದಲ್ಲಿ ಭಗವಾನ್ ವಿಷ್ಣು ಮೋಹಿನಿಯ ವೇಷದಲ್ಲಿ ಅಮೃತದ ಪಾತ್ರೆಯನ್ನು ಹೊತ್ತೊಯ್ದಾಗ, ದೇವತೆಗಳು ಮತ್ತು ದಾನವರ ನಡುವಿನ ಹೋರಾಟದಲ್ಲಿ ಅಮೃತದ ನಾಲ್ಕು ಹನಿಯು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಬಿದ್ದಿತು ಹೀಗೆ ಮೂರು ಪವಿತ್ರ ತೀರ್ಥಸ್ಥಳ ಜೊತೆಗೆ ಪ್ರಯಾಗರಾಜ್ ಕೂಡ ಒಂದು ಪವಿತ್ರ ತೀರ್ಥಸ್ಥಳವಾಗಿದೆ ಎಂದು ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.
ಪಟ್ಟಣದಿಂದ ಪ್ರಯಾಗರಾಜ್ ಕುಂಭಮೇಳಕ್ಕೆ ಹೊರಟ ಭಕ್ತರ ವಾಹನಕ್ಕೆ ಭಾನುವಾರ ವರುಣ ನಗರದ ಶರಣ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಎರಡು ಬಸ್ ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಯಾಗರಾಜ್‌ದಲ್ಲಿ ಜನವರಿ 13 ರಿಂದ ಪ್ರಾರಂಭವಾಗಿ ಫೆಬ್ರವರಿ 26 ರವರೆಗೆ ಮಹಾಕುಂಭಮೇಳ ನಡೆಯುತ್ತಿದ್ದು 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದೆ ಎಂದರು.
ಹಿಂದೂ ಪುರಾಣಗಳ ಪ್ರಕಾರ ಕುಂಭಮೇಳದಲ್ಲಿ ದೇವರುಗಳು ಭೂಮಿಗೆ ಇಳಿದು ಭಕ್ತರನ್ನು ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ ಜೊತೆಗೆ ಪ್ರಯಾಗರಾಜ್ ಈ ಸ್ಥಳದಲ್ಲಿ ಹರಿಯುವ ನದಿಯಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿ, ಮಹಾಕುಂಭ ಮೇಳ ಕೇವಲ ಉತ್ಸವ ಮಾತ್ರವಲ್ಲ ಸಾವಿರಾರು ವರ್ಷಗಳ ಐತಿಹ್ಯ, ಪುರಾತನ ಇತಿಹಾಸ ಹೊಂದಿರುವ ಉತ್ಸಾಹಭರಿತ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಈ ಉತ್ಸವವು ಪ್ರಾಚೀನ ಹಿಂದೂ ಪುರಾಣ ಮತ್ತು ಭಾರತದ ಶ್ರೀಮಂತ ಧಾರ್ಮಿಕ ಪರಂಪರೆಗೆ ಸಾಕ್ಷಿಯಾಗಿದೆ. ಚಿತ್ತಾಪುರದಿಂದ ಪ್ರಯಾಗರಾಜ್, ಅಯೋಧ್ಯ, ಕಾಶಿ, ಮತ್ತು ಗೋರಕಪೂರ ವರೆಗೆ ಎರಡು ಬಸ್ ವ್ಯವಸ್ಥೆ ಮೂಲಕ 60 ಕ್ಕೂ ಅಧಿಕ ಭಕ್ತರು ಹೋಗುತ್ತಿದ್ದೇವೆ ಎಂದು ಹೇಳಿದರು.
ಇದೆ ವೇಳೆ ಕಲಬುರ್ಗಿ ಘಟಕ-1ರ ವ್ಯವಸ್ಥಾಪಕ ಅಶೋಕ ದೊಡ್ಡಮನಿ, ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಸಯ್ಯಾದ್ ನಿಜಾಮೋದ್ದಿನ್ ಚಿಸ್ತಿ, ಮಲ್ಲಣ್ಣ ಮಾಸ್ಟರ್ ಮುಡಬೂಳ ರವರಿಗೆ ಭಕ್ತರು ಸನ್ಮಾನಿಸಿ ಧನ್ಯವಾದಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭಕ್ತರಾದ ಮಲ್ಲಿಕಾರ್ಜುನ ಪೂಜಾರಿ, ಶಾಂತಕುಮಾರ್ ಹತ್ತಿ, ಅನಿಲ್ ವಡ್ಡಡಗಿ, ಸಂತೋಷ ಕಲಾಲ್, ಬಸವರಾಜ ಬೊಮ್ಮನಳ್ಳಿ, ಅಶ್ವಥ್ ರಾಠೋಡ, ರಮೇಶ್ ಬೊಮ್ಮನಳ್ಳಿ, ಪಂಕಜಗೌಡ, ಚಂದ್ರು ಅಲ್ಲೂರ, ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಪಡಶೆಟ್ಟಿ, ಚಂದ್ರು, ಸಂಜು ಪಲಾಪ್, ರಾಜಶೇಖರ ಬಳ್ಳಾ, ನಾಗರಾಜ್ ಸುಲ್ತಾನಪೂರ, ಪ್ರಭು ಬೊಮ್ಮನಳ್ಳಿ, ಸೇರಿದಂತೆ ಇತರರು ಇದ್ದರು.