ಚಿತ್ತಾಪುರ ವಿಠಲ್ ಹೇರೂರು ಜಯಂತ್ಯೋತ್ಸವ, ಅನ್ನ ದಾಸೋಹ, ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟನೆ, ವಿಠಲ್ ಹೇರೂರು ಮಹಾನ್ ಮಾನವತಾವಾದಿಯಾಗಿದ್ದರು: ಅಂಬಾಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕೋಲಿ ಸಮಾಜದ ಸಂಘಟನೆಗಾಗಿ ಹಾಗೂ ಉದ್ದಾರಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟ ದಿ.ವಿಠಲ್ ಹೇರೂರು ಅವರು ಹುಟ್ಟು ಹೋರಾಟಗಾರರು ಹಾಗೂ ಮಹಾನ್ ಮಾನವತಾವಾದಿಯಾಗಿದ್ದರು ಎಂದು ಪಿಎಸ್ಐ ಶ್ರೀಶೈಲ್ ಅಂಬಾಟಿ ಹೇಳಿದರು.
ಪಟ್ಟಣದ ಲಾಡ್ಜಿಂಗ್ ಕ್ರಾಸ್ ಹತ್ತಿರದ ಅಂಬಿಗರ ಚೌಡಯ್ಯ ವೃತ್ತದಲ್ಲಿ ತಾಲೂಕು ಕೋಲಿ ಸಮಾಜದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ದಿ.ವಿಠಲ್ ಹೇರೂರು ಅವರ 72 ನೇ ಜಯಂತ್ಯೋತ್ಸವ, ಅನ್ನ ದಾಸೋಹ ಹಾಗೂ ತಂಪಾದ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟಿನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಿನ ಕಾಲದಲ್ಲಿ ತಮ್ಮ ಸ್ವಂತಕ್ಕಾಗಿ ಬಡದಾಡುವ ಸಮಯದಲ್ಲಿ ದಿ.ವಿಠಲ್ ಹೇರೂರು ಅವರು ಕೋಲಿ ಸಮಾಜಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟು ಜೀವನದ ಕೊನೆಯವರೆಗೂ ಹೋರಾಟ ಮಾಡಿದ್ದರು ಎಂದು ಹೇಳಿದರು.
ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿ, ಕೋಲಿ ಸಮಾಜದ ಸಂಘಟನೆಗಾಗಿ ಇಡೀ ಜೀವನ ತ್ಯಾಗ ಮಾಡಿದ ತ್ಯಾಗಮಯಿ ಆಗಿದ್ದಾರೆ ಎಂದರು. ವಿಠಲ್ ಹೇರೂರು ಅವರ ಹೋರಾಟದ ಫಲವಾಗಿ ಇಂದು ರಾಜ್ಯದಲ್ಲಿ ಕೋಲಿ ಸಮಾಜ ಬಲಿಷ್ಠವಾಗಿದೆ ಹಾಗೂ ರಾಜಕೀಯವಾಗಿ ಗುರುತಿಸಲ್ಪಟ್ಟಿದೆ ಎಂದು ಹೇಳಿದರು. ಅಂಬಿಗರ ಚೌಡಯ್ಯ ವೃತ್ತದಲ್ಲಿ ಬಯಲು ಗ್ರಂಥಾಲಯ ಮಾಡುವ ಮೂಲಕ ಜನರಲ್ಲಿ ಓದುವ ಹವ್ಯಾಸ ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಜಿಲ್ಲಾ ಟಾಪರ್ ನಾಗರತ್ನ ಬೆಂಕಿ ಭಾಗೋಡಿ ವಿದ್ಯಾರ್ಥಿನಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಉದ್ಘಾಟಿಸಿದರು, ಕರದಾಳ ಹಳ್ಳದ ಯಲ್ಲಮ್ಮ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ, ಗೌರವಾಧ್ಯಕ್ಷ ಭೀಮಣ್ಣ ಸೀಬಾ, ಮುಖಂಡರಾದ ಸಾಬಣ್ಣ ಡಿಗ್ಗಿ, ಆನಂದ ಪಾಟೀಲ ನರಿಬೋಳ, ಹರ್ಷದ್ ಪಟೇಲ್ ದಂಡೋತಿ, ಸಂತೋಷ ಇವಣಿ, ಮಲ್ಲಿಕಾರ್ಜುನ ಬೆಣ್ಣೂರಕರ್, ಶಿವುಕುಮಾರ ಸುಣಗಾರ, ಸಾಬಣ್ಣ ಭರಾಟೆ, ಶರಣು ಅರಣಕಲ್, ಗೂಳಿ ಡಿಗ್ಗಿ, ಕಿಶನ್ ಮುಕೆ, ಶಾಂತಕುಮಾರ್ ಹತ್ತಿ, ಅನೀಲ ವಡ್ಡಡಗಿ, ಶ್ರೀಕಾಂತ್ ಸುಲೇಗಾಂವ, ರಾಜಶೇಖರ್ ಮೂಲಿಮನಿ, ಅಂಬು ಹೊಳಿಕಟ್ಟಿ, ತಿಪ್ಪಣ್ಣ ಇವಣಿ, ತಮ್ಮಣ್ಣ ಹೊನಗೇರಿ, ಸೋಮು ದಂಡಗುಂಡ, ಭೀಮು ಭಾಗೋಡಿ, ಕಾಶಿನಾಥ ತೆಂಗಳಿ, ಮಲ್ಲಿಕಾರ್ಜುನ ಮುಗುಳನಾಗಾಂವಿ, ರವಿ ದೊಡ್ಡಮನಿ, ಶರಣು ಹಸಬಾ, ಭೀಮು ಇಂಗಳಗಿ, ರಘು ವಾಡಿ, ಮಲ್ಲು ರಾಜೋಳಾ, ಸಂಗು ಯರಗಲ್, ಬಸವರಾಜ ದಂಡಗುಂಡ ಸೇರಿದಂತೆ ಇತರರು ಇದ್ದರು. ತಾಲೂಕು ಯುವ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕರ್ ನಿರೂಪಿಸಿದರು.