Oplus_0

ಚಿತ್ತಾಪುರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ದೇವಿಂದ್ರ ಯಾಬಾಳ ಅಧಿಕಾರ ಸ್ವೀಕಾರ, ಕಾಂಗ್ರೆಸ್ ಪಕ್ಷದ ಸಂಘಟನೆಗೆ ಯುವ ಕಾರ್ಯಕರ್ತರೇ ಅಡಿಪಾಯ: ನಾಗರೆಡ್ಡಿ ಪಾಟೀಲ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕಾಂಗ್ರೆಸ್ ಪಕ್ಷದ ಸಂಘಟನೆಗೆ ಯುವ ಕಾರ್ಯಕರ್ತರೇ ಅಡಿಪಾಯವಾಗಿದ್ದಾರೆ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ದೇವಿಂದ್ರ ಯಾಬಾಳ ದಿಗ್ಗಾಂವ ಅವರು ಅಧಿಕಾರ ಸ್ವೀಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಅಧ್ಯಕ್ಷರಾದವರು ಸಕ್ರಿಯವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ತರುವ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ನಿಕಟಪೂರ್ವ ಯುವ ಅಧ್ಯಕ್ಷ ಸಂಜಯ ಬುಳಕರ್ ಅವರು ತಮ್ಮ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಪ್ರತಿ ಹಳ್ಳಿಯಲ್ಲೂ ಯುವ ಕಾರ್ಯಕರ್ತರ ಪಡೆ ಸಿದ್ದಪಡಿಸಿದ್ದಾರೆ ಹೀಗಾಗಿ ಅವರ ಸೇವೆ ಅನನ್ಯ, ಅದೇ ರೀತಿಯಲ್ಲಿ ಈಗಿನ ಯುವ ಅಧ್ಯಕ್ಷ ದೇವಿಂದ್ರ ಯಾಬಾಳ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ವ್ಯಕ್ತಿ ಹಾಗೂ ಜಾತಿಗಿಂತ ಪಕ್ಷದ ನೀತಿ ಮುಖ್ಯ, ಹೀಗಾಗಿ ದೇವಿಂದ್ರ ಯಾಬಾಳ ಚುನಾವಣೆ ಮೂಲಕ ಯುವ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅನ್ಯ ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷದ ಕಡೆ ಸೆಳೆಯುವ ಪ್ರಯತ್ನ ಮಾಡಬೇಕು ಎಂದು ಹೇಳಿದರು. ನಿಕಟಪೂರ್ವ ಯುವ ಅಧ್ಯಕ್ಷ ಸಂಜಯ ಬುಳಕರ್ ಬ್ಲಾಕ್ ಕಾಂಗ್ರೆಸ್ ಗೆ ಬೆನ್ನೆಲುಬಾಗಿ ಸೇವೆ ಸಲ್ಲಿಸಿದ್ದಾರೆ ಪಕ್ಷದ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೂತನ ಯುವ ಅಧ್ಯಕ್ಷ ದೇವಿಂದ್ರ ಯಾಬಾಳ ದಿಗ್ಗಾಂವ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಸಲಹೆ ಸೂಚನೆ ಹಾಗೂ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ ಪಕ್ಷದ ಸಂಘಟನೆಗೆ ಹಗಲಿರುಳು ಶ್ರಮಿಸುತ್ತೇನೆ ಎಂದು ಹೇಳಿದರು.

ನಿಕಟಪೂರ್ವ ಯುವ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬುಳಕರ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ ಪಟೇಲ್ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಮುಖಂಡರಾದ ನಾಗರೆಡ್ಡಿ ಗೋಪಸೇನ್, ಶೇಖ್ ಬಬ್ಲು, ಗುರುನಾಥ್ ಗುದಗಲ್, ರಾಮಲಿಂಗ ಬಾನರ್, ನಿಂಗಣ್ಣ ಹೆಗಲೇರಿ, ಹನುಮಂತ ಸಂಕನೂರ, ಶರಣು ಡೋಣಗಾಂವ, ಮಲ್ಲಿಕಾರ್ಜುನ ಹೂನ್ನಪೂರ, ಮೌನ ಗಂಗಾಧರ್ ಡಿಗ್ಗಿ, ಶಿವಶರಣ ಮೆಂಗಾ, ಅಶೋಕ ಬಾನರ್, ನೀಲಕಂಠ ಮುಕೆ, ಲೋಕೇಶ್ ಭೀಮನಳ್ಳಿ, ದುರ್ಜನ್ ನಾಟೀಕಾರ ಸೇರಿದಂತೆ ಅನೇಕ ಮುಖಂಡರು, ಯುವಕರು ಇದ್ದರು. ಬಸವರಾಜ್ ಚಿನಮಳ್ಳಿ ನಿರೂಪಿಸಿದರು. ಕಾರ್ಯಕ್ರಮದ ಮುನ್ನ ಯುವ ಅಧ್ಯಕ್ಷ ದೇವಿಂದ್ರ ಯಾಬಾಳ ಅವರನ್ನು ಮೆರವಣಿಗೆ ಮೂಲಕ ಪಕ್ಷದ ಕಚೇರಿಗೆ ಕರೆತರಲಾಯಿತು.

Spread the love

Leave a Reply

Your email address will not be published. Required fields are marked *

error: Content is protected !!