ಚಿತ್ತಾಪುರದಲ್ಲಿ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ಹಾಗೂ ಪರಿಷ್ಕೃತ ಜಿಎಸ್ಟಿ ಮಂಡಲ ಕಾರ್ಯಾಗಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವದೇಶಿ ಸಂಕಲ್ಪದ ಆತ್ಮ ನಿರ್ಭರ ಭಾರತ ಅಭಿಯಾನದಲ್ಲಿ ಗ್ರಾಮ, ಬೂತ್ ಮಟ್ಟದ ಕಾರ್ಯಕರ್ತರು ತೊಡಗಿಸಿಕೊಂಡು ಜನಜಾಗೃತಿ ಮೂಡಿಸಬೇಕು ಎಂದು ಜಿಎಸ್ಟಿ ಅಭಿಯಾನದ ಜಿಲ್ಲಾ ಸಂಚಾಲಕ ಚಂದ್ರಶೇಖರ್ ರೆಡ್ಡಿ ನಾಲವಾರ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ಹಾಗೂ ಪರಿಷ್ಕೃತ ಜಿಎಸ್ಟಿ ಮಂಡಲ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನೆಗಳಲ್ಲಿ ಬಳಸುವ ವಸ್ತು ಸ್ವದೇಶಿ ಇರುವಂತೆ ಸ್ಥಳೀಯ ಉತ್ಪನ್ನವನ್ನೇ ಖರೀದಿಸಲು ಗಮನ ನೀಡಿದಾಗ ಖಂಡಿತ ಬದಲಾವಣೆ ಸಾಧ್ಯ ಎಂದರು.
ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ಏಕ್ ಭಾರತ್ ಶ್ರೇಷ್ಠ ಭಾರತ್, ಆತ್ಮ ನಿರ್ಭರ ಭಾರತ್ ಹಾಗೂ ಮೇಕ್ ಇನ್ ಇಂಡಿಯಾ ಮೂಲಕ ಸ್ವಾಭಿಮಾನಿ, ಸ್ವಾವಲಂಭಿ ಭಾರತ ನಿರ್ಮಾಣದ ಕನಸನ್ನು ಪ್ರಧಾನಿ ನರೇಂದ್ರ ಮೋದಿಜಿ ಬಿತ್ತಿದರು. ದೇಶ ರಕ್ಷಣೆಯ ವ್ಯವಸ್ಥೆಯಲ್ಲಿ, ಸೇನೆ, ಶಸ್ತ್ರಗಳಲ್ಲಿ ಭಾರತ ಆತ್ಮ ನಿರ್ಭರವಾಗಿದೆ ಎಂದು ಹೇಳಿದರು.
ಆತ್ಮ ನಿರ್ಭರ ಭಾರತ ಅಭಿಯಾನದ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್, ಜಿಲ್ಲಾ ಸಹ ಸಂಚಾಲಕ ಶರಣು ಜ್ಯೋತಿ ಅವರು ಮಾತನಾಡಿ, ಪ್ರಧಾನಿ ಮೋದಿಯ ಸಾಧನೆ ಪ್ರತಿಯೊಬ್ಬರು ಮೆಚ್ಚುವಂತಹದ್ದು, ಜಿಎಸ್ಟಿ ಇಳಿಕೆಯಿಂದ ಜನರ ಜೀವನ ಹಸನಾಗಿದೆ. ಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಜಿಎಸ್ಟಿ ಕಡಿತ ಮಾಡಿರುವುದು ಪ್ರತಿಯೊಬ್ಬರಿಗೂ ಅನುಕೂಲವಾಗಿದ್ದು, ನಾಡಿನ ಜನತೆಗೆ ದಸರಾ ಬಂಪರ್ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಮುಖಂಡರಾದ ಸುರೇಶ್ ರಾಠೋಡ, ಭೀಮರೆಡ್ಡಿ ಗೌಡ ಕುರಾಳ ನಾಗರಾಜ ಭಂಕಲಗಿ, ರಮೇಶ್ ಬೊಮ್ಮನಳ್ಳಿ, ದೇವವರಾಜ್ ತಳವಾರ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೂಗಾರ, ಶರಣಗೌಡ ಭೀಮನಹಳ್ಳಿ ಗೋಪಾಲ್ ರಾಥೋಡ್ ಪ್ರಸಾದ್ ಅವಂಟಿ, ಮಾಳಪ್ಪ ಕೊಳ್ಳಿ, ಮಲ್ಲಿಕಾರ್ಜುನ ಅಲ್ಲೂರಕರ್, ಈಶ್ವರ ದೊಡ್ಡಮನಿ, ಸುರೇಶ ಬೆನಕನಳ್ಳಿ, ವಕ್ತಾರ ಶಿವರಾಮ ಚವ್ಹಾಣ, ಶಾಂತಕುಮಾರ್ ಮಳಖೇಡ ಸೇರಿದಂತೆ ಇತರರು ಇದ್ದರು. ಗುಂಡು ಮತ್ತಿಮುಡು ಆತ್ಮ ನಿರ್ಭರ ಭಾರತದ ಪ್ರತಿಜ್ಞಾವಿಧಿ ಬೋಧಿಸಿದರು, ಮಲ್ಲಿಕಾರ್ಜುನ ಇಟಗಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

