ಚಿತ್ತಾಪುರ ಅಂಬೇಡ್ಕರ್ ಅವರ 134ನೇ ಜಯಂತಿ ನಿಮಿತ್ತ ರಕ್ತದಾನ ಶಿಬಿರ, ರಕ್ತದಾನ ಮಹಾದಾನ: ಹಿರೇಮಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ದಾನಗಳಲ್ಲಿಯೇ ರಕ್ತದಾನ ಮಹಾದಾನವಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ವಿಶ್ವರತ್ನ ಬಾಬಾಸಾಹೇಬ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವ ನಿಮಿತ್ತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತದಾನ ಮಾಡುವುದರಿಂದ ರಕ್ತದ ಕೊರತೆಯಿಂದ ಜೀವ ಕಳೆದುಕೊಳ್ಳುವವರಿಗೆ ಆಸರೆಯಾಗಲಿದೆ, ರಕ್ತದಾನದಿಂದ ಆರೋಗ್ಯ ವೃದ್ಧಿಯಾಗಲಿದೆ ಹೊಸ ರಕ್ತ ಉತ್ಪತ್ತಿಯಾಗಲಿದೆ ಹೀಗಾಗಿ ದೈರ್ಯವಾಗಿ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಲು ಮುಂದಾಗಿ ಎಂದು ಕಿವಿಮಾತು ಹೇಳಿದರು.
ಪೃಥ್ವಿ ಸಾಗರ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರದಲ್ಲಿ ಒಟ್ಟು ಇಪ್ಪತ್ತು ಜನ ಯುವಕರು ರಕ್ತದಾನ ಮಾಡಿದರು. ವಿಶ್ವನಾಥ್ ಬೀದಿಮನಿ, ರಾಹುಲ್ ರವಿ ಬಿದರಿ, ಕಾರ್ತಿಕ್ ಕಲ್ಲಕ್, ನಾಗಾರ್ಜುನ ಮುಡಬೂಳ, ಸಚಿನ್ ಸಿಂಗ್, ಸಿದ್ಧಾರ್ಥ್ ಮುಡಬೂಳ, ರಘು ಬಡಿಗೇರ್, ಸಂದೀಪ್ ಗಾಯಕವಾಡ, ವಿಶಾಲ್ ಕಾಂಬ್ಳೆ, ಅಂಬರೀಶ್ ಮತ್ತಿಮುಡ್, ವಿಕಾಸ್ ಮಾತ್ತಿಮುಡ್, ಸುಭಾಷ್ ಗುತ್ತೇದಾರ, ಪಾರುಶುರಾಮ್ ಆಗಿ, ನಿತೀನಿ ಟುಬಾಕ್, ಅಕ್ಷಯ್ ಬಡಿಗೇರ್, ಹುಶನಪ್ಪ ಭಂಕಲಗಿ ಅವರು ರಕ್ತದಾನ ಮಾಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಬಿಇಒ ಶಶಿಧರ ಬಿರಾದಾರ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಳಗಿ, ಚಂದ್ರಶೇಖರ ಕಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಉದಯಕುಮಾರ್ ಸಾಗರ್, ರಾಜಣ್ಣ ಕರದಾಳ, ಜಗನ್ನಾಥ ಮುಡಬೂಳಕರ್, ಸಂಜಯ ಬುಳಕರ್, ಭೀಮರಾಯ ಹೊತಿನಮಡಿ, ಸಾಗರ ಚಿಟ್ಟೇಕರ್ ಸೇರಿದಂತೆ ಇತರರು ಇದ್ದರು.

