ಚಿತ್ತಾಪುರದಲ್ಲಿ ಮಾತಾ ಮಾಣಿಕೇಶ್ವರಿ ಅಮ್ಮನವರ ಹುಟ್ಟು ಹಬ್ಬ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದಲ್ಲಿ ತಾಲೂಕು ಯುವ ಕೋಲಿ ಸಮಾಜದ ವತಿಯಿಂದ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು ಹಾಗೂ ಗುರು ಪೂರ್ಣಿಮೆಯ ನಿಮಿತ್ತ ಶ್ರೀಗುರು ನಿಜ ಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಯುವ ಅಧ್ಯಕ್ಷ ಮಲ್ಲಿಕಾರ್ಜುನ್ ಅಲ್ಲೂರಕರ್, ಯುವ ಮುಖಂಡರಾದ ಅಂಬು ಹೋಳಿಕಟ್ಟಿ, ಶಾಮ್ ದುಗನೂರ, ಗುರಣ್ಣ ಚೆನ್ನಕ್ಕಿ, ಮಲ್ಲಿಕಾರ್ಜುನ್ ಮುಗುಳನಾಗಾಂವ, ಭೀಮು ಭಾಗೋಡಿ, ತಿಪ್ಪಣ್ಣ ಇವಣಿ, ಶರಣು ಭಾಗೋಡಿ, ಸಂಗು ನಾಟೀಕಾರ್ ಸೇರಿದಂತೆ ಇತರರು ಇದ್ದರು.
