ಚಿತ್ತಾಪುರದಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಬಸವನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಎಲ್.ಎಫ್ ಸಂಸ್ಥೆ ಮತ್ತು ಅಶೋಕ ಲೇಲ್ಯಾoಡ ಸಹಯೋಗದೊಂದಿಗೆ ಶುಕ್ರವಾರ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ತಿಪ್ಪಣ್ಣ ಎಸ್. ದೊಡ್ಡಮನಿ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗಾಗಿ ಇರುವ ಹಕ್ಕುಗಳು ಬದುಕುವ ಹಕ್ಕು, ರಕ್ಷಣೆ ಹಕ್ಕು, ಅವಕಾಶ ಮತ್ತು ವಿಕಾಸ ಹೊಂದುವ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳ ಬಗ್ಗೆ ಸಹವಿವಾರವಾಗಿ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ದೇವಪ್ಪ ನಂದೂರಕರ್, ಶಾಲೆಯ ಮುಖ್ಯ ಗುರು ವೀರಸಂಗಪ್ಪ ಸುಲೇಗಾoವ ಅವರು ಮಾತನಾಡಿದರು. ಪ್ರಾಸ್ತವಿಕವಾಗಿ ಎಸ್.ಆರ್.ಪಿ ಸಂಜೀವಕುಮಾರ ಅವರು ಮಾತನಾಡಿದರು. ಅಥಿತಿಗಳಾಗಿ ಎಸ್ಡಿಎಂಸಿ ಸದಸ್ಯರಾದ ಬೇಬಿ ಬೆನಕನಳ್ಳಿ, ಸಂಗೀತಾ ಕ್ಷಿರಸಾಗರ, ಶಿಕ್ಷಕಿಯರಾದ ಲಲಿತಾದೇವಿ ಸಜ್ಜನಶೆಟ್ಟಿ, ಶ್ರೀದೇವಿ ಕೋಬಾಳ್ಕರ್, ಎಲ್.ಎಲ್.ಎಫ್ ಸಂಸ್ಥೆಯ ಸುಶ್ಮಿತಾ, ನಿರ್ಮಲಾ, ಪ್ರೀತಿ ಜ್ಯೋತಿ, ಮಹೇಶ, ಶರಣಮ್ಮ, ಭಾಗವಹಿಸಿದ್ದರು.
ಕಾರ್ಯಕ್ರಮದ ಮುನ್ನ ಮಕ್ಕಳೊಂದಿಗೆ ಎಲ್.ಎಲ್.ಎಫ್ ಸಂಸ್ಥೆಯವರು, ಶಾಲೆಯ ಶಿಕ್ಷಕರು ಭಾಗವಹಿಸಿ ಮಕ್ಕಳ ಹಕ್ಕುಗಳ ಘೋಷಣೆಯೊಂದಿಗೆ ಪ್ರಭಾತ್ ಫೇರಿ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ಡಿಎಂಸಿ ಅಧ್ಯಕ್ಷೆ ಮಂಜುಳಾ ಎಮ್. ಆಚಿಕೇರಿ ವಹಿಸಿದ್ದರು. ಜ್ಯೋತಿ ಸ್ವಾಗತಿಸಿದರು, ಗೌತಮಿ ನಿರೂಪಿಸಿದರು, ಎಲ್.ಎಲ್.ಎಫ್ ಸಂಸ್ಥೆಯ ಆರ್.ಪಿ ಕು. ಮಲ್ಲಮ್ಮ ವಂದಿಸಿದರು.