ರೈತರ ಜಮೀನುಗಳನ್ನು ವಕ್ಫ್ ಆಸ್ತಿ ನಮೂದಿಸಿ ಒತ್ತುವರಿ ಮಾಡಿದ ವಕ್ಫ್ ಬೋರ್ಡ್ ಕ್ರಮ ಖಂಡಿಸಿ ನಾಳೆ ಬಿಜೆಪಿ ಯಿಂದ ಬೃಹತ್ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಜ್ಯ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ವಕ್ಫ್ ಬೋರ್ಡ್ ರೈತರ ಹಾಗೂ ಹಿಂದೂಗಳ ಜಮೀನನ್ನು ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ಖಂಡಿಸಿ ಹಾಗೂ ಕೂಡಲೇ ಅವರವರ ಜಮೀನು ಮರಳಿ ಅವರವರ ಹೆಸರಿಗೆ ನಮೂದಿಸಬೇಕು ಹಾಗೂ ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎನ್ನುವುದು ಪತ್ತೆ ಮಾಡಿ ಉಗ್ರ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಚಿತ್ತಾಪುರ ಮಂಡಲದ ವತಿಯಿಂದ ನ.4 ರಂದು ಬೆಳಿಗ್ಗೆ 10.30 ಕ್ಕೆ ಪಟ್ಟಣದ ಲಾಡ್ಜಿಂಗ್ ಕ್ರಾಸ್ ಹತ್ತಿರ ಬೃಹತ್ ಪ್ರತಿಭಟನೆಯೊಂದಿಗೆ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಆದ್ದರಿಂದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಎಂದು ತಿಳಿಸಿದ್ದಾರೆ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಕರ್ನಾಟಕದ ವಕ್ಫ್ ಬೋರ್ಡ್ ರಾಜ್ಯದ ಅನೇಕ ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರಗಳಾದ ಶತಮಾನಗಳ ಇತಿಹಾಸವುಳ್ಳ ಪುರಾತನ ದೇವಾಲಯಗಳು, ಮಠಗಳು, ಹಾಗೂ ದಲಿತರ ಭೂಮಿಗಳು, ವೀಶೆಷವಾಗಿ ಹಿಂದೂ ರೈತರ ಜಮೀನು ಮತ್ತು ಸ್ಮಶಾನ ಭೂಮಿಯು ಸಹಿತ ವಕ್ಫ್ ಅಸ್ತಿ ಎಂದು ಪಹಣಿ ಮತ್ತು ಆಸ್ತಿ ಪತ್ರದಲ್ಲಿ ನಮೂದಿಸುವ ಮೂಲಕ ಅಕ್ರಮವಾಗಿ ವಕ್ಫ್ ಮಂಡಳಿ ಒತ್ತುವರಿ ಮಾಡುತ್ತಿದ್ದು, ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ನೇರವಾಗಿ ಸಹಕಾರ ನೇಡುತ್ತಿದ್ದು, ಸಾವಿರಾರು ಹಿಂದೂ ಕುಟುಂಬಗಳ ಹಿಂದೂ ಭಕ್ತರ ಆತಂಕಕ್ಕೆ ಕಾರಣವಾಗಿದ್ದು ತಕ್ಷಣ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನು ವಾಪಾಸ್ ಪಡೆದು ಅವರವರ ಹೆಸರಿಗೆ ಮಾಡಿಕೊಡಬೇಕು ಹಾಗೂ ಈ ಷಡ್ಯಂತ್ರದ ಹಿಂದಿರುವ ಸಮಾಜ ಘಾತುಕರು ಯಾರೆಂದು ತನಿಖೆ ನಡೆಸಿ ಅವರಿಗೆ ಕ್ರೂರ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.