ಚಿತ್ತಾಪುರದಲ್ಲಿ ನಾಳೆ ನಾಗಾವಿ ಸಾಂಸ್ಕೃತಿಕ ರತ್ನ ಪ್ರಶಸ್ತಿ ಪ್ರಧಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಇಲ್ಲಿಯ ನಾಗಾವಿ ಸಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಸಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಸಾಧಕರಿಗೆ ನಾಗಾವಿ ನಾಡಿನ ಸಂಸ್ಕೃತಿಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ನವೆಂಬರ್ 21 ರಂದು ಬೆಳಗ್ಗೆ 10.45 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ನಾಗಾವಿ ಸಂಸ್ಕೃತಿಯ ಪ್ರತಿಷ್ಠಾನದ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರು ಕಾರ್ಯದರ್ಶಿ ನರಸಪ್ಪ ಚಿನ್ನಕಟ್ಟಿ ಅವರು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ತಹಶೀಲ್ದಾರ್ ನಾಗಯ್ಯ ಹಿರೇಮಠ ಉದ್ಘಾಟಸಲಿದ್ದಾರೆ. ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಮಹಮ್ಮದ್ ಅಕ್ರಂ ಪಾಶಾ ಅಧ್ಯಕ್ಷತೆ ವಹಿಸಲಿದ್ದಾರೆ. ಡಿವೈಎಸ್ಪಿ ಶಂಕರಗೌಡ ಪಾಟೀಲ ಪ್ರಶಸ್ತಿ ಪ್ರಧಾನ ಮಾಡುವರು, ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ, ಸರ್ಕಾರ ನೌಕರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಮಣ್ಣ ಸಾಲಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರೇಂದ್ರಕುಮಾರ್ ಕೊಲ್ಲೂರ್, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ನಾಗಾವಿ ನಾಡಿನ ಸಾಂಸ್ಕೃತಿಕ ರತ್ನ. ಪುರಸ್ಕೃತರು: ಮಹಾದೇವಿ ಕೊಲ್ಲೂರ್ ಜನಪದ ಕ್ಷೇತ್ರ, ಶೈಲಶ್ರೀ ಸಹ ಶಿಕ್ಷಕರು ಪ್ರಾಥಮಿಕ ಶಾಲೆ ಕಮರವಾಡಿ ಶಿಕ್ಷಣ ಕ್ಷೇತ್ರ, ವಿಕ್ರಂ ತೇಜಸ್ ವಾಡಿ ಸಾಹಿತ್ಯ ಸಂಘಟಕ ಕ್ಷೇತ್ರ, ಮಲ್ಲಿಕಾರ್ಜುನ್ ಮುಡಬೂಳಕರ್ ಮಾಧ್ಯಮ ಕ್ಷೇತ್ರ, ಭೀಮ್ ಸೇನ್ ರಾಮಣ್ಣ ಭೀಮನಹಳ್ಳಿ ಕೃಷಿ ಕ್ಷೇತ್ರ.