ಚಿತ್ತಾಪುರದಲ್ಲಿ ಸಂವಿಧಾನ ದಿನಾಚರಣೆ, ಸಂವಿಧಾನ ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ: ಬುಳಕರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಂವಿಧಾನವನ್ನು ನಾವೆಲ್ಲರೂ ಸೇರಿ ರಕ್ಷಿಸಿದರೆ ಸಂವಿಧಾವು ನಮ್ಮನ್ನು ರಕ್ಷಿಸುತ್ತದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬುಳಕರ್ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮೋ ರಕ್ಷಿತಿ ರಕ್ಷಿತಃ ಅನ್ನೋ ಬದಲು ಸಂವಿಧಾನ ರಕ್ಷತಿ ರಕ್ಷಿತಃ ಎನ್ನುವ ವೇದ ವಾಕ್ಯದೊಂದಿಗೆ ಸಂವಿಧಾನ ರಕ್ಷಣೆಗೆ ನಾವೆಲ್ಲರೂ ಗಟ್ಟಿಯಾಗಿ ನಿಲ್ಲಬೇಕೆಂದರು.
ಜಗತ್ತಿನನಲ್ಲಿ ಅತೀ ಶ್ರೇಷ್ಠವಾದ ಸಂವಿಧಾನವೆಂದರೆ ಅದು ಭಾರತ ಸಂವಿಧಾನವಾಗಿದೆ. ದೇಶದ ಕಟ್ಟ ಕಡೆಯ ವ್ಯಕ್ತಿಗೆ ಸಮಾನತೆ, ರಾಜಕೀಯ, ಆರ್ಥಿಕ ಸೇರಿ ಹಲವು ಮೂಲಭೂತ ಅವಕಾಶಗಳನ್ನು ನೀಡಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ ಮಾತನಾಡಿ, ಸಂವಿಧಾನದ ಬದಲಾಗಿ ಮನುಸ್ಮೃತಿ ಜಾರಿ ಮಾಡಲು ಹೊರಟಿರುವ ಸಂಘ ಪರಿವಾರದ ಗುಪ್ತ ಕಾರ್ಯಸೂಚಿಯನ್ನೇ ಪೇಜಾವರಶ್ರೀ ಅವರು ಮುಂದುವರಿಸುತ್ತಿದ್ದಾರೆ. ದಲಿತ, ಹಿಂದುಳಿದ, ಶೋಷಿತ ಸಮುದಾಯಗಳು ಸೇರಿದಂತೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಸ್ವಾಭಿಮಾನ-ಘನತೆಯಿಂದ ಬದುಕುಬೇಕಾದ ವ್ಯವಸ್ಥೆ ಇರುವುದು ಸಂವಿಧಾನದಡಿಯಲ್ಲಿ ಮಾತ್ರ ಎಂದು ಹೇಳಿದ್ದಾರೆ
ಈ ಸಂಧರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶ ಸಂಜೀವಕುಮಾರ ಮಾನಕರ್, ಪಿಎಸ್ಐ ಶ್ರೀಶೈಲ್ ಅಂಬಾಟಿ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಮುಖಂಡರಾದ ಶಿವಕಾಂತ್ ಬೆಣ್ಣೂರಕರ್, ಚಂದ್ರಶೇಖರ ಕಾಶಿ, ನಾಗರೆಡ್ಡಿ ಗೋಪಸೇನ್, ಓಂಕಾರೇಶ್ವರ್ ರೆಶ್ಮಿ, ರಾಜಣ್ಣ ಹುಂಡೇಕರ್, ದೇವಿಂದ್ರ ಕುಮಸಿ, ರಾಮಲಿಂಗ ಬಾನರ, ಹಣಮಂತ ಸಂಕನೂರ್, ಸಾಬಣ್ಣ ಕಾಶಿ, ನಾಗು ಕಲ್ಲಕ, ಬಾಬುರಾವ ಮಾಸ್ಟರ್, ಬಸವರಾಜ್ ಕೆಬಿ, ಕರಣಕುಮಾರ್ ಅಲ್ಲೂರ, ಮಹಾoತೇಶ್ ಬೊಮ್ಮನಹಳ್ಳಿ, ಲಕ್ಷ್ಮಿಕಾಂತ್ ಸಾಲಿ, ವಿಠ್ಠಲ್ ಕಟ್ಟಿಮನಿ, ಸಂತೋಷ ಪೂಜಾರಿ, ಮಾರುತಿ ಅಳ್ಳೋಳ್ಳಿ, ಬಸವರಾಜ್ ಮೈನಾಳಕರ್, ಶಿವುಕುಮಾರ್ ಹರಬೋಳ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಇದ್ದರು.
“ನವೆಂಬರ್ 26, 1949 ರಂದು ಭಾರತೀಯ ಸಂವಿಧಾನವನ್ನು ಅಂಗೀಕರಿಸಲಾಯಿತು ಮತ್ತು ಸಂವಿಧಾನವನ್ನು ಅಂಗೀಕರಿಸಿದ ಈ ದಿನವನ್ನು ಸಂವಿಧಾನ ದಿನ ಎಂದು ಆಚರಿಸಲಾಗುತ್ತದೆ”.-ನಾಗಯ್ಯ ಹಿರೇಮಠ ತಹಸೀಲ್ದಾರ್ ಚಿತ್ತಾಪುರ.