Oplus_131072

ಚಿತ್ತಾಪುರದಲ್ಲಿ ಅಂಬೇಡ್ಕರ್ ಅವರ 134 ನೇ ಜಯಂತ್ಯೋತ್ಸವ, ಅಂಬೇಡ್ಕರ್ ಅವರ ಬಗ್ಗೆ ಹೆಚ್ಚು ಅಧ್ಯಯನ ಮಾಡಿ: ಪಂಡಿತ್ ಬಿ.ಕೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಅಂಬೇಡ್ಕರ್ ಅವರನ್ನು ತಲೆಯ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುವುದಲ್ಲ ಅವರ ವಿಚಾರಧಾರೆಯನ್ನು ತಲೆಯಲ್ಲಿ ಇಟ್ಟುಕೊಂಡು ನಡೆಯಬೇಕು ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು ಎಂದು ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಪಂಡಿತ್.ಬಿ.ಕೆ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ‌ಆರ್.ಅಂಬೇಡ್ಕರ್ ಅವರ 134 ನೇ ಜಯಂತ್ಯೋತ್ಸವ ಸಮಾರಂಭದಲ್ಲಿ  ಉಪನ್ಯಾಸಕರಾಗಿ ಮಾತನಾಡಿದ ಅವರು, ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವಗಳು ಜೀವನದಲ್ಲಿ ಎಷ್ಟರ ಮಟ್ಟಿಗೆ ನಾವುಗಳು ಅಳವಡಿಸಿಕೊಂಡಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಈಗಿನವರು ಚಂದ್ರಲೋಕ, ಮಂಗಳ ಲೋಕಕ್ಕೆ ಹೋಗುತ್ತಿದ್ದಾರೆ ಆದರೆ ಪಕ್ಕದ ಅಂಗಳಕ್ಕೆ ಹೋಗುತ್ತಿಲ್ಲ ಕಾರಣ ಆಸ್ತಿ ಅಂತಸ್ತು ಹಾಗೂ ಜಾತಿ ಅಡ್ಡಿ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನನ್ನು ಮೂರ್ತಿಯಲ್ಲಿ ಹುಡುಕಬೇಡಿ ಪುಸ್ತಕದಲ್ಲಿ ಹುಡುಕಿ ಎಂದು ಹೇಳಿದ್ದಾರೆ. ಚಾಯಿ ಮಾರುವ ವ್ಯಕ್ತಿ ಪ್ರಧಾನಿ ಹಾಗೂ ಪತ್ರಿಕೆ ಮಾರುವ ವ್ಯಕ್ತಿ ರಾಷ್ಟ್ರಪತಿ ಆಗುತ್ತಾರೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರ ಸಂವಿಧಾನ ಮೂಲ ಕಾರಣ ಎಂದರು.

ಎಷ್ಟೇ ಕಷ್ಟ ಇದ್ದರೂ ಪುಸ್ತಕ ಖರೀದಿ ಮಾಡುವುದನ್ನು ಬಿಡುತ್ತಿರಲ್ಲಿಲ್ಲ, ಪುಸ್ತಕ ಎದೆಯ ಮೇಲೆ ಇಟ್ಟುಕೊಂಡು ಕೊನೆಯುಸಿರು ಎಳೆದ ಅಂಬೇಡ್ಕರ್ ಅವರಿಗೆ ಪುಸ್ತಕದ ಮೇಲೆ ಆಗಾಧ ಪ್ರೀತಿ ಇತ್ತು. ಅಂಬೇಡ್ಕರ್ ಅವರು ನಿಧನರಾದಾಗ ಜಗತ್ತಿನ 193 ದೇಶಗಳು ಅರ್ಧ ದ್ವಜ ಏರಿಸಿ ಗೌರವ ನಮನಗಳು ಸಲ್ಲಿಸಿದ್ದರು ಎಂದರು.

ಎಲ್ಲಾಕಡೆ ಬಟ್ಟೆ, ಬಾಂಡೆಗಳ ಮಾಲ್ ನಿರ್ಮಾಣ ಆಗಿವೆ ಆದರೆ ಇಲ್ಲಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಶಿಕ್ಷಣ ಮಹಲ್ ಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ಅಂಬೇಡ್ಕರ್ ಅವರು ಅಸಮಾನತೆ, ಜಾತೀಯತೆ ಹಾಗೂ ಮೌಡ್ಯದ ವಿರುದ್ಧ ಹೋರಾಡಿದ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದು ಹೇಳಿದರು.

ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಉನ್ನತ ಮಟ್ಟದ ಸ್ಥಾನಕ್ಕೆ ಹೋಗಲು ಸಾಧ್ಯ ಅದಕ್ಕೆ ಅಂಬೇಡ್ಕರ್ ಅವರೇ ಉದಾಹರಣೆ, ಮೂಕ ನಾಯಕ ಪತ್ರಿಕೆಯ ಮೂಲಕ ಜನರಲ್ಲಿ ಅರಿವು ಮೂಡಿಸಿ ಸಂಘಟನೆಗೆ ಒತ್ತು ನೀಡಿದ್ದರು. ದೇಶದಲ್ಲಿ ಅಸಮಾನತೆ ಹೋಗಲಾಡಿಸಲು ಸ್ವಾಭಿಮಾನದ ಬದುಕು ರೂಪಿಸಲು ಅವಿರತವಾಗಿ ಹೋರಾಟ ಮಾಡಿದ್ದರು ಎಂದು ಹೇಳಿದರು.

ತಾವು ಕಷ್ಟಪಟ್ಟು ಎಲ್ಲರಿಗೂ ಬೆರಳು ನೀಡಿದ ಅಂಬೇಡ್ಕರ್ ಅವರಿಗೆ ದಲಿತ ಸೂರ್ಯ ಎಂದು ಕರೆಯಲಾಗಿದೆ. ಒಂದೇ ದಿನಕ್ಕೆ ಜಯಂತಿ ಮಾಡಿದರೆ ಸಾಲದು ನಿತ್ಯ ಜೀವನದಲ್ಲಿ ಅವರ ವಿಚಾರಗಳು ಅಳವಡಿಸಿಕೊಂಡಾಗ ಮಾತ್ರ ಜಯಂತಿಗೆ ಅರ್ಥ ಬರಲಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಸದಸ್ಯ ಜಗದೀಶ್ ಚವ್ಹಾಣ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಕೃಷಿ ವಿಜ್ಞಾನಿ ಅನೀಲ್ ಪವಾರ್ ಸೇರಿದಂತೆ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಸಿಪಿಐ ಚಂದ್ರಶೇಖರ ತಿಗಡಿ, ಕೃಷಿ ಅಧಿಕಾರಿ ಸಂಜೀವಕುಮಾರ ಮಾನಕರ್, ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ,  ಬಿಇಒ ಶಶಿಧರ ಬಿರಾದಾರ, ಎಪಿಎಂಸಿ ಕಾರ್ಯದರ್ಶಿ ಸವಿತಾ ಗೋಣಿ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಸರ್ಕಾರಿ ಡಿಗ್ರಿ ಕಾಲೇಜಿನ ಪ್ರಾಚಾರ್ಯ ಡಾ. ಶಿವಶರಣಪ್ಪ ಬಿರಾದಾರ, ಟಿಪಿಒ ಶಿವಶರಣಪ್ಪ ಮಂಠಾಳೆ, ಜಯಂತಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶಿವಕಾಂತ ಬೆಣ್ಣೂರಕರ್, ಪಾಶಾಮಿಯ್ಯಾ ಖುರೇಷಿ, ಅಹ್ಮದ್ ಸೇಟ್, ಸಾಹಿತಿ ನಾಗಪ್ಪ ಬೆಳಮಗಿ, ಶ್ರೀಕಾಂತ್ ಸಿಂದೆ, ಲೋಹಿತ್ ಮುದ್ದಡಗಿ, ದೇವಿಂದ್ರ ಕುಮಸಿ, ಜಗನ್ನಾಥ ಮುಡಬೂಳಕರ್, ರಾಜಪ್ಪ ಹುಂಡೇಕರ್, ಶಿವಮೂರ್ತಿ ಯರಗಲ್, ನಾಗೇಂದ್ರ ಬುರ್ಲಿ, ನಿಂಗಣ್ಣ ಹೆಗಲೇರಿ, ರಾಮಲಿಂಗ ಬಾನರ್, ದೇವು ಯಾಬಾಳ, ರಾಜಣ್ಣ ಕರದಾಳ, ಮಹೇಶ್ ಜಾಯಿ, ಮಲ್ಲಿಕಾರ್ಜುನ ಮುಡಬೂಳಕರ್, ಸಂಜಯ ಬುಳಕರ್, ಸಾಬಣ್ಣ ದೊಡ್ಡಮನಿ, ಶರಣು ತಲಾಟಿ, ಪೃಥ್ವಿ ಸಾಗರ, ಬಸವರಾಜ ಮುಡಬೂಳಕರ್, ಮಾರುತಿ ಹುಳಗೋಳಕರ್, ವಿಠಲ್ ಕಟ್ಟಿಮನಿ, ಶ್ರೀಕಾಂತ್ ಹೊಸ್ಸಳ್ಳಿ, ಪ್ರಜ್ವಲ್ ಬೆಣ್ಣೂರಕರ್, ಮಹಾಂತೇಶ್ ಬೊಮ್ಮನಳ್ಳಿ, ನಾಗೇಶ್ ಹಲಗಿ, ನಾಗರಾಜ ಓಂಕಾರ, ಕಿರಣ್ ಕುಮಾರಿ, ಸುಭಾಷ್ ಕಲ್ಮರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಅರುಣಕುಮಾರ ಅಂಬೇಡ್ಕರ್ ಗೀತೆ ಹಾಡಿದರು, ಉದಯಕುಮಾರ್ ಸಾಗರ ಸಂಗಡಿಗರು ಭೀಮ್ ಕ್ರಾಂತಿ ಹಾಡಿದರು, ಪಶು ಅಧಿಕಾರಿ ಡಾ.ಶಂಕರ ಕಣ್ಣಿ ಸ್ವಾಗತಿಸಿದರು, ಸಂತೋಷ ಶಿರನಾಳ ನಿರೂಪಿಸಿದರು, ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್ ವಂದಿಸಿದರು. ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರ ನಡೆಯಿತು, ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

Spread the love

Leave a Reply

Your email address will not be published. Required fields are marked *

error: Content is protected !!