ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ; ಪೂಜಾರಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನ್ಯಾಯಾಲಯವು ತೀರ್ಪು ತನಿಖೆ ನಡೆಸಿ ಎಂದು ಹೇಳಿದೆ ಅಷ್ಟೇ. ಸಿದ್ದರಾಮಯ್ಯ ಕೇಳಿರುವ ಅರ್ಜಿ ತಿರಸ್ಕರಿಸಿ ವಿಚಾರಣೆ ನಡೆಸುವಂತೆ ಸ್ಪಷ್ಟಪಡಿಸಿದೆ. ತನಿಖೆ ನಡೆಯಲಿ, ಸ್ಪಷ್ಟ ನಿರ್ಧಾರ ಬರುವರೆಗೆ ವಿರೋಧ ಪಕ್ಷದವರು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೃತಿಕತೆ ಇಲ್ಲ ಎಂದು ಕನಕದಾಸರ ತರುಣ ಸಂಘ (ಕುರುಬರ ಸಮಾಜ) ಅಧ್ಯಕ್ಷ ಸಿದ್ದು ಎಸ್.ಪುಜಾರಿ ವಾಡಿ ಎಂದು ತಿಳಿಸಿದ್ದಾರೆ
ಈ ಕುರಿತು ಪತ್ರಿಕೆ ಹೇಳಿಕೆ ನೀಡಿದ ಅವರು, ಕರ್ನಾಟಕ ಜನತೆ ಪ್ರಜಾಪ್ರಭುತ್ವ ಚುನಾವಣೆಯಲ್ಲಿ 135 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ. ಜನರ ಆಶೀರ್ವಾದ ಸಿದ್ದರಾಮಯ್ಯನವರ ಮೇಲಿದೆ. ಕೇಂದ್ರದ ಬಿಜೆಪಿ, ರಾಜ್ಯಪಾಲರ ಹುದ್ದೆ ಮತ್ತು ಕಚೇರಿ ದುರುಪಯೋಗ ಪಡಿಸಿಕೊಂಡಿದೆ. ಹಲವಾರು ಬಿಜೆಪಿ ನಾಯಕರ ಕಡತಗಳು ತನಿಖೆಗಾಗಿ ಕೊಟ್ಟರೂ ಅದನ್ನು ಬದಿಗಿಟ್ಟು ಸಿದ್ದರಾಮಯ್ಯ ನವರ ಪ್ರಕರಣ ತೆಗೆದುಕೊಂಡು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಶಾಸಕ ಮುನಿರತ್ನ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕೇಳಿಬಂದ ಪ್ರಕರಣಗಳ ಮೊದಲು ತನಿಖೆ ನಡೆಯಲಿ ಎಂದು ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ಬಿಜೆಪಿ ಅವರಿಗೆ ಹೊಟ್ಟೆಯುರಿ ಹೆಚ್ಚಾಗಿದೆ ಹೀಗಾಗಿ ಏನಾದರೊಂದು ವಿಷಯ ಇಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ, ಬಿಜೆಪಿ ಅವರು ಏನೇ ಮಾಡಿದರೂ ಸಿದ್ದರಾಮಯ್ಯ ಅವರಿಗೆ ಏನು ಆಗುವುದಿಲ್ಲ ಎಂದು ಸಿದ್ದು ಪೂಜಾರಿ ತಿಳಿಸಿದ್ದಾರೆ.