ದಂಡಗುಂಡ ಗ್ರಾಮದಲ್ಲಿ ಶಾಲೆ ಬಿಟ್ಟ ಮಕ್ಕಳು ಮರಳಿ ಶಾಲೆಗೆ ಬರುವಂತೆ ಪ್ರಭಾತ್ ಫೇರಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದಂಡಗುಂಡ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಸೋಮವಾರ ಶಾಲೆ ಬಿಟ್ಟ ಮಕ್ಕಳು ಮರಳಿ ಶಾಲೆಗೆ ಬರುವಂತೆ ಪ್ರಭಾತ್ ಫೇರಿ ನಡೆಯಿತು.
ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಮಕ್ಕಳು ಸೇರಿ ಊರಿನ ಪ್ರಮುಖ ಬೀದಿಗಳಲ್ಲಿ ತಮಟೆ ಭಾರಿಸಿಕೊಂಡು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಕೂಲಿಗೆ ಹೋಗೋ ಮಕ್ಕಳನ್ನು ಶಾಲೆಗೆ ಕಳುಹಿಸಿ, ಅಕ್ಷರ ಕಲಿತರೆ ಬಾಳೆಲ್ಲ ಸುಂದರ, ಶಿಕ್ಷಣವೇ ಶಕ್ತಿ ಸೇರಿದಂತೆ ಹಲವಾರು ಘೋಷವಾಕ್ಯಗಳು ಕೂಗುತ್ತಾ ಊರಿನ ಪ್ರಮುಖ ಬೀದಿಗಳಲ್ಲಿ ಪ್ರಭಾತ್ ಪೆರಿ ಮೂಲಕ ಜಾಗೃತಿ ಮೂಡಿಸಲಾಯಿತು.
ನಿರಂತರವಾಗಿ ಶಾಲೆಗೆ ಗೈರಾಗುವುದರಿಂದ ಮಕ್ಕಳ ಕಲಿಕೆ ಕುಂಠಿತವಾಗುತ್ತದೆ, ಮಕ್ಕಳು ದಿನನಿತ್ಯ ಶಾಲೆಗೆ ಬಂದರೆ ಮಾತ್ರ ಕಲಿಕೆ ನಿರಂತರವಾಗಿರಲು ಸಾಧ್ಯವಾಗುತ್ತದೆ ಎಂದು ಮುಖ್ಯಗುರು ಸಿದ್ದಣ್ಣ ಹಡಪದ ಪಾಲಕರಿಗೆ ತಿಳಿಸಿದರು.
ಪ್ರಭಾತ್ ಫೇರಿಯಲ್ಲಿ ಶಾಲೆಯ ಮುಖ್ಯ ಗುರು ಸಿದ್ದಣ್ಣ ಹಡಪದ, ಸಹ ಶಿಕ್ಷಕರಾದ, ಪ್ರಿಯಾಂಕಾ, ಅಂಬುಜಾಕ್ಷಿ, ಕವಿತಾ, ಶೀಲಾ, ಚಂದ್ರಕಾಂತ, ಶರಣಪ್ಪ, ಸೋಮಪ್ಪ ಸೇರಿದಂತೆ ಎಸ್ಡಿಎಂಸಿ ಸದಸ್ಯರು, ಯುವಕರು ಭಾಗವಹಿಸಿದ್ದರು.