ಫೆ.27 ರಿಂದ ಜೀವನ ದರ್ಶನ ಪ್ರವಚನ, ಮಾರ್ಚ.3 ರಂದು ಶ್ರೀ ಗುರುಲಿಂಗೇಶ್ವರ ಶಿವಯೋಗಿಗಳ 21ನೇ ಪುಣ್ಯಸ್ಮರಣೆ ಮಹೋತ್ಸವ
ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ
ತಾಲೂಕಿನ ದಿಗ್ಗಾಂವ ಗ್ರಾಮದ ಕಂಚಗಾರಹಳ್ಳದ ಲಿಂ. ಶ್ರೀ ಗುರುಲಿಂಗೇಶ್ವರ ಶಿವಯೋಗಿಗಳ 21ನೇ ಪುಣ್ಯಸ್ಮರಣೆ ಮಹೋತ್ಸವ ನಿಮಿತ್ತ ಜೀವನ ದರ್ಶನ ಪ್ರವಚನ ಫೆ.27 ರಿಂದ ಮಾರ್ಚ್ 3 ರವರೆಗೆ ಪ್ರತಿ ನಿತ್ಯ ರಾತ್ರಿ 7 ಗಂಟೆಗೆ ನಡೆಯಲಿದೆ, ಪಾಳಾ ಕಟ್ಟಿಮನಿ ಹಿರೇಮಠದ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯರು ಪ್ರವಚನ ನೀಡಲಿದ್ದಾರೆ ಎಂದು ಮಲ್ಲಯ್ಯ ಸ್ವಾಮಿ ಸ್ಥಾವರಮಠ ತಿಳಿಸಿದ್ದಾರೆ.
ಪ್ರತಿವರ್ಷದ ಪದ್ಧತಿಯಂತೆ ಮಾರ್ಚ್ 3 ರಂದು ಸಾಯಂಕಾಲ 4 ಗಂಟೆಗೆ ಬಡವ ಬಲ್ಲಿದ ಉಳವಿಗಾಗಿ ಭವರೋಗದ ವೈದ್ಯರಾಗಿ ಸೇವೆ ಗೈದಿರುವ ಲಿಂ. ಶ್ರೀ ಗುರುಲಿಂಗೇಶ್ವರ ಪಲ್ಲಕ್ಕಿ ಉತ್ಸವ ಪುರವಂತರ ಆಟದೊಂದಿಗೆ ವಿಜೃಂಭಣೆಯಿಂದ ಕಲ್ಪಶ್ರೀ ರತ್ನ ಶ್ರೀ ಮಲ್ಲಯ್ಯ ಸ್ವಾಮಿಗಳ ಇವರ ಘನ ನೇತೃತ್ವದಲ್ಲಿ ನಡೆಯಲಿದೆ.
ರಾತ್ರಿ 7 ಗಂಟೆಗೆ ನಾಡಿನ ಹರ ಗುರು ಚರಮೂರ್ತಿ ಸಮ್ಮುಖದಲ್ಲಿ ಜೀವನ ದರ್ಶನ ಪ್ರವಚನದ ಮಹಾಮಂಗಲ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಆಗಮಿಸಿ ತನು ಮನ ಧನದಿಂದ ಸೇವೆ ಸಲ್ಲಿಸಿ ಪೂಜ್ಯರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಮಾಡಿದ್ದಾರೆ.