Oplus_0

ಡೋಣಗಾಂವ ಗ್ರಾಮದಲ್ಲಿ ಅಂತೂರ ಬೆಂತೂರ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳ 17 ನೇ ಸಿದ್ದ ಸಮಾಧಿ ಶಿವಯೋಗ | ಅ.31 ರಂದು ಮುಕ್ತಾಯ ಸಮಾರಂಭ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಗದಗ ಜಿಲ್ಲೆಯ ಅಂತೂರ ಬೆಂತೂರ ಬೂದೀಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ತಾಲೂಕಿನ ಡೋಣಗಾಂವ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಅ.9 ರಿಂದ 61ನೇ ಮೌನಾನುಷ್ಠಾನ ಕೈಗೊಂಡಿದ್ದು, 17ನೇ ಸಿದ್ದ ಸಮಾಧಿ ಶಿವಯೋಗ ಕಳೆದ ಅ.21 ರಿಂದ ಪ್ರಾರಂಭವಾಗಿದ್ದು ಅ.31ಕ್ಕೆ ಮುಕ್ತಾಯ ಸಮಾರಂಭ ನಡೆಯಲಿದೆ. ಸಾಯಂಕಾಲ ರಾಮಲಿಂಗೇಶ್ವರ ದೇವಸ್ಥಾನದಿಂದ ಡೋಣಗಾಂವ ವರೆಗೆ ಪಾದಯಾತ್ರೆ ನಡೆಯಲಿದೆ, ನಂತರ ನೂತನವಾಗಿ ನಿರ್ಮಣವಾದ ಶ್ರೀ ರಾಚೋಟೇಶ್ವರ ಹಿರೇಮಠ ಲೋಕಾರ್ಪಾಣೆ ಆಗಲಿದೆ ಎಂದು ಗ್ರಾಮದ ಮುಖಂಡರಾದ ಶರಣಗೌಡ ಪೊಲೀಸ್ ಪಾಟೀಲ, ನಿಂಗಣ್ಣ ಹೆಗಲೇರಿ, ಮಲ್ಲಿಕಾರ್ಜುನ ಹೊನ್ನಪೂರ ಅವರು ತಿಳಿಸಿದ್ದಾರೆ.

ದಿನನಿತ್ಯ ಶ್ರೀ ಶರಣಬಸವೇಶ್ವರ ಪುರಾಣ ಹಾಗೂ ಹಗಲು ರಾತ್ರಿ ನಿರಂತರ ಭಜನಾ ಕಾರ್ಯಕ್ರಮ ನಡೆಯುತ್ತಿದೆ, ದಿನ ಕಳೆದಂತೆ ದೂರ ದೂರದಿಂದ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ ಹೀಗಾಗಿ ನಿರಂತರವಾಗಿ ಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರವಚನಕಾರರು ಪಂ. ಮಡಿವಾಳಯ್ಯ ಶಾಸ್ತ್ರಿಗಳು (ಜೇರಟಗಿ) ಸಂಗೀತ ಸೇವೆ ಯಶವಂತ ಬಡಿಗೇರ, ಸಿಂದಗಿ, ತಬಲಾ ಸೇವೆ ರಾಜಶೇಖರ ಕಟ್ಟಿಸಂಗಾವಿ ಅವರು ಸಲ್ಲಿಸುತ್ತಿದ್ದಾರೆ.

ನವೆಂಬರ್ 1 ರಂದು ಡೋಣಗಾಂವ ಗ್ರಾಮದಿಂದ ಕಲಬುರಗಿಯ ಶ್ರೀ ಶರಣಬಸವೇಶ್ವರ ದೇವಸ್ಥಾನದ ವರೆಗೆ ಶ್ರೀಗಳು ದುಶ್ಚಟಗಳ ಭಿಕ್ಷೆ – ಸದ್ಗುಣಗಳ ದೀಕ್ಷೆಯ ಸಂಕಲ್ಪದೊಂದಿಗೆ ಮಹಾ ಪಾದಯಾತ್ರೆ ಹಮ್ಮಿಕೊಂಡಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಅ.31 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಮುಕ್ತಾಯ ಸಮಾರಂಭದ ದಿವ್ಯ ಸಾನಿಧ್ಯವನ್ನು ಅಂತೂರ ಬೆಂತೂರ ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದ ಶ್ರೀ ಜಗದ್ಗುರು ಡಾ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು, ದಿಗ್ಗಾಂವ ಶ್ರೀ ಸಿದ್ಧವೀರ ಶಿವಾಚಾರ್ಯ ಮಹಾಸ್ವಾಮಿಗಳು, ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ಗುರುಮಿಠಕಲ್ ಖಾಸಾಮಠ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು, ಹಲಕರ್ಟಿ ಶ್ರೀ ಅಭಿನವ ಮುನೀಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ತೊನಸನಹಳ್ಳಿ ಶ್ರೀ ಮಲ್ಲಣ್ಣಪ್ಪ ಮಹಾಸ್ವಾಮಿಗಳು, ದಂಡಗುಂಡ ಶ್ರೀ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಜಾಕನಹಳ್ಳಿ ಶ್ರೀ ಅಭಿನವ ಗವಿಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಗುಡಂಪಲ್ಲಿ ಶ್ರೀ ಸೋಮೇಶ್ವರ ಮಹಾಸ್ವಾಮಿಗಳು, ಅಳ್ಳೋಳ್ಳಿ ಶ್ರೀ ಡಾ. ಸಂಗಮನಾಥ ಮಹಾಸ್ವಾಮಿಗಳು, ಅಣಬಿ ಶ್ರೀ ಚನ್ನವೀರ ಸ್ವಾಮಿಗಳು, ದಿಗ್ಗಾಂವ ಕಂಚಗಾರಹಳ್ಳಿಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಅವರು ಸಾನಿಧ್ಯ ವಹಿಸುವರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು, ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಜ್ಯೋತಿ ಬೆಳಗಿಸುವರು, ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕಿರಣ್ ದೇಶಮುಖ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಉದ್ಯಮಿ ಚಂದ್ರಶೇಖರ ತೆಂಗಳಿ ಸಾತನೂರ, ತಾಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಜಿಪಂ ಮಾಜಿ ಅಧ್ಯಕ್ಷ ರಮೇಶ್ ಮರಗೋಳ, ಮಾಜಿ ವಿಪಕ್ಷ ನಾಯಕ ಶಿವಾನಂದ ಪಾಟೀಲ, ಕೋಲಿ ಕಬ್ಬಲಿಗ ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷ ಲಚ್ಚಪ್ಪ ಜಮಾದಾರ, ಜಿಪಂ ಮಾಜಿ ಸದಸ್ಯ ಶಿವರುದ್ರ ಭೀಣ್ಣಿ, ಅಪೇಕ್ಸ್ ಬ್ಯಾಂಕ್ ನಿರ್ದೇಶಕ ಸುನೀಲ್ ದೊಡ್ಡಮನಿ, ಕಾಂಗ್ರೆಸ್ ಮುಖಂಡ ರಾಜ ಪಾಟೀಲ ಬೆನಕನಳ್ಳಿ, ಬಿಜೆಪಿ ಮುಖಂಡ ಶಿವಲಿಂಗ ರಡ್ಡಿ ಬೆನಕನಳ್ಳಿ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಜಿಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಎಮ್ಮೆನೋರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್, ಜೆಡಿಎಸ್ ಮುಖಂಡ ಭರಮಾನಂದ ಮಾಲಿ ಪಾಟೀಲ  ಹೊಸಳ್ಳಿ, ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಎಸ್.ಸಿ. ಪಾಟೀಲ, ಸಿಪಿಐ ಜಗದೇವಪ್ಪ ನಾಗಾ, ಸಿಪಿಐ ಚಂದ್ರಶೇಖರ ತಿಗಡಿ, ಸಿಪಿಐ ನಟರಾಜ ಲಾಡೆ, ಮಂಜುನಾಥ ರೆಡ್ಡಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

“ಗದಗ ಜಿಲ್ಲೆಯ ಅಂತೂರ ಬೆಂತೂರ ನಲ್ಲಿ ವಿಶ್ವಶಾಂತಿಗಾಗಿ 33 ದಿನಗಳ ನಿರ್ವಿಕಲ್ಪ ಶಿವಯೋಗ ಸಮಾಧಿ ತಪಸ್ಸು ಕೈಗೊಂಡು ಚಿತ್ತಾಪುರ ತಾಲೂಕಿನ ಡೋಣಗಾಂವ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ 11 ದಿನಗಳ ಕಾಲ ಶಿವಯೋಗ ಸಮಾಧಿ ಕೈಗೊಂಡಿದ್ದಾರೆ. ಅ.31 ರಂದು ನಡೆಯಲಿರುವ ಮುಕ್ತಾಯ ಸಮಾರಂಭಕ್ಕೆ ಬೇಕಾದ ಎಲ್ಲಾ ಸಕಲ ಸಿದ್ಧತೆಗಳನ್ನು ಭಕ್ತಾದಿಗಳ ಸಹಕಾರದಿಂದ ಮಾಡಲಾಗಿದೆ”.-ಕಾಶಪ್ಪ ಹಲಕರ್ಟಿ ಡೋಣಗಾಂವ.

Spread the love

Leave a Reply

Your email address will not be published. Required fields are marked *

error: Content is protected !!