ಡಾ.ಪ್ರಭುರಾಜ್ ಕಾಂತಾ ಜನ್ಮದಿನದ ಪ್ರಯುಕ್ತ ಕ್ರೀಡಾ ಸಾಮಗ್ರಿಗಳು ವಿತರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ.ಪ್ರಭುರಾಜ್ ಕಾಂತಾ ಅವರು ತಮ್ಮ ಹುಟ್ಟುಹಬ್ಬವನ್ನು ಅಣ್ಣೆಮ್ಮ ಗೊಬ್ಬರ ಪ್ರೌಢಶಾಲೆ ಹಾಗೂ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ಆಚರಿಸಿಕೊಳ್ಳುವ ಮೂಲಕ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಂಬದಾಸ್ ತುರೆ, ಶಿವಾನಂದ ಜಳಕಿ, ಮುಖ್ಯ ಗುರು ಕಸ್ತೂರಿ ಪಾಟೀಲ, ಶರಣಬಸಪ್ಪ ಬೊಮ್ಮನಳ್ಳಿ, ಮನೋಹರ್ ಹಡಪದ, ಚಂದ್ರಶೇಖರ್ ನಾಲವಾರ, ನರಸಪ್ಪ ಚಿನ್ನಕಟ್ಟಿ, ಶಂಕರ ರಾಥೋಡ, ಸಲೀಂ, ನಾಗರಾಜ್ ಕುಲಕರ್ಣಿ, ಗೀತಾ ಸುಲಿಗೆ, ಶೈಲಜಾ ಹರಸೂರ್, ಲಲಿತಮ್ಮ ರೇಷ್ಮೆ, ಸಾಜಿದ್, ಬಸ್ಸಮ್ಮ ಸುಲೇಗಾಂವ, ನಿರ್ಮಲಾ ಅಲ್ಲೂರ, ಸಂಜನಾ ಸೇರಿದಂತೆ ಇತರರು ಇದ್ದರು.

