ಹೆಸರು, ಉದ್ದು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಖರೀದಿಗೆ ಅವಧಿ ವಿಸ್ತರಣೆ: ಸಚಿವ ಪ್ರಿಯಾಂಕ್ ಖರ್ಗೆ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಹೆಸರು ಕಾಳು, ಉದ್ದು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಖರೀದಿಗೆ ಅವಧಿ ವಿಸ್ತರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2025-26 ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ (FAQ) ಗುಣಮಟ್ಟದ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ ಖರೀದಿಸಲು ಸರ್ಕಾರ ದಿನಾಂಕ:25-09-2025 ರ ಮೂಲಕ ಹಾಗೂ ಸೋಯಾಬಿನ್ ಖರೀದಿಸಲು 29-09-2025 ರ ಮೂಲಕ ಆದೇಶ ಹೊರಡಿಸಲಾಗಿರುತ್ತದೆ.

ಸರ್ಕಾರದ ಆದೇಶ ದಿ:05-12-2025 ರನ್ವಯ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಉತ್ಪನ್ನವನ್ನು ರೈತರಿಂದ ಖರೀದಿಸಲು ನಿಗದಿಪಡಿಸಿರುವ ಗರಿಷ್ಠ ಮಿತಿಯನ್ನು ತೆಗೆದು FRUITS ತಂತ್ರಾಂಶದಲ್ಲಿ ಲಭ್ಯವಿರುವ ರೈತರ ಬೆಳೆಯ ಮಾಹಿತಿ ಆಧಾರದ ಮೇಲೆ ಎಕರೆಗೆ ಅನುಗುಣವಾಗಿ ಖರೀದಿಸಲು ಆದೇಶಿಸಲಾಗಿರುತ್ತದೆ.

ಸರ್ಕಾರದ ಆದೇಶ ದಿನಾಂಕ:31-12-2025 ರನ್ವಯ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ (FAQ) ಗುಣಮಟ್ಟದ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಮಾರಾಟ ಮಾಡಲು ಈಗಾಗಲೇ ನಿಗಧಿತ ಅವಧಿಯಲ್ಲಿ ನೊಂದಾಯಿಸಿಕೊಂಡಿರುವ ರೈತರು ಮಾರಾಟ ಮಾಡಲು ಖರೀದಿ ಅವಧಿಯನ್ನು ಈ ಕೆಳಕಂಡ ಅವಧಿಗೆ ವಿಸ್ತರಿಸಲಾಗಿರುತ್ತದೆ ಎಂದು ಸಚಿವರು ಹೇಳಿದ್ದಾರೆ.

ವಿವರ :

ಹೆಸರು ಕಾಳು- ನಿಗದಿಪಡಿಸಿದ ದರ: 8768 ಹಾಗೂ ದಿನಾಂಕ : 22-01-2026.

ಉದ್ದಿನ ಕಾಳು- ನಿಗದಿಪಡಿಸಿದ ದರ: ರೂ.7800- ಅಂತಿಮ ದಿನಾಂಕ: 22-01-26

ಸೂರ್ಯಕಾಂತಿ-ನಿಗದಿಪಡಿಸಿದ ದರ: ರೂ.7721- ಅಂತಿಮ ದಿನಾಂಕ: 22-01-26

ಸೋಯಾಬೀನ್- ನಿಗದಿಪಡಿಸಿದ ದರ: ರೂ.5328- ಅಂತಿಮ ದಿನಾಂಕ : 26-01-26

ಜಿಲ್ಲೆಯ ರೈತ ಭಾಂದವರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ (PACS) ಹಾಗೂ FPO ಗಳಿಗೆ ಭೇಟಿ ನೀಡಿ ತಾವು ಬೆಳೆದ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ ಹಾಗು ಸೋಯಾಬೀನ ನಿಗದಿತ ಅವಧಿಯಲ್ಲಿ ಮಾರಾಟ ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಮೊಬೈಲಗೆ ಸಂಪರ್ಕಿಸಲು ಕೋರಿದ್ದಾರೆ.

1) ಉದ್ದಿನ ಕಾಳು & ಸೋಯಾಬೀನ ಖರೀದಿಗಾಗಿ ಮೋ.ನಂ. 9449864446 (KSCMF)

2) ಹೆಸರು ಕಾಳು ಖರೀದಿಗಾಗಿ ಮೋ.ನಂ. 9964474444 (KSPAML)

3) ಸೂರ್ಯಕಾAತಿ ಖರೀದಿಗಾಗಿ ಮೋ.ನಂ. 9591812142 – (KOF).

Spread the love

Leave a Reply

Your email address will not be published. Required fields are marked *

error: Content is protected !!