ಇಂಗಳಗಿ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ರಮಾಬಾಯಿ ಈರಣ್ಣ ಗುಡುಬಾ ಅವರಿಗೆ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಇಂಗಳಗಿ ಗ್ರಾಮ ಪಂಚಾಯಿತಿ ವಾರ್ಡ್ ನಂ.3 ರ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ರಮಾಬಾಯಿ ಈರಣ್ಣ ಗುಡುಬಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪತ್ರಕರ್ತ ಡಾ.ಸಾಯಬಣ್ಣ ಗುಡುಬಾ ಮಾತನಾಡಿ, ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ನಮ್ಮ ತಾಯಿ ಸ್ವತಂತ್ರ ಅಭ್ಯರ್ಥಿಯಾಗಿ ರಮಾಬಾಯಿ ಅವರು ಭರ್ಜರಿ ಗೆಲುವು ಸಾಧಿಸುವಲ್ಲಿ ಮತದಾರರ ಪಾತ್ರ ಬಹುಮುಖ್ಯವಾಗಿದೆ.
ನಾನು ನಂಬಿದ ಜನರು ಕೊನೆಗೂ ಕೈಬಿಡಲಿಲ್ಲ, ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಮತದಾರರಿಗೆ ಎಂತಹ ಒತ್ತಡ, ಆಸೆ ಆಮೀಷಗಳು ಒಡ್ಡಿದ್ಧರೂ ಸಹ ಮತದಾರರು ಮಾತ್ರ ಯಾವುದಕ್ಕೂ ಒಳಗಾಗದೇ ನಮ್ಮ ತಾಯಿ ಅವರಿಗೆ ಆಶೀರ್ವಾದ ಮಾಡಿದ್ದರಿಂದ ಗೆಲುವು ಸಾಧ್ಯವಾಗಿದೆ ಇದು ನಮ್ಮ ಗೆಲುವು ಅಲ್ಲ ಮತದಾರರ ಗೆಲುವು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಜನರ ನಿರೀಕ್ಷೆಯಂತೆ ಸೇವೆ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಹಾಗೂ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಶಾಂತಕುಮಾರ್ ಮಳಖೇಡ, ಕೋಲಿ ಸಮಾಜದ ಮುಖಂಡ ನಿಂಗಣ್ಣ ಹೆಗಲೇರಿ, ಪತ್ರಕರ್ತರಾದ ಡಾ.ಸಾಯಬಣ್ಣ ಗುಡುಬಾ, ಎಂಡಿ ಮಶಾಕ್, ಯಲ್ಲಯ್ಯ ಕಲಾಲ್, ದೊಡ್ಡ ಸಾಬಣ್ಣ, ಸಚೀನ್ ಹೂಡಾ ಸೇರಿದಂತೆ ಇತರರು ಇದ್ದರು.