Oplus_0

ಇಂಗಳಗಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗ್ರಾಮ ಆರೋಗ್ಯ ತರಬೇತಿ, ಟಿಬಿಗೆ ನಿರ್ಲಕ್ಷ್ಯವಹಿಸಿದರೇ ಜೀವಕ್ಕೆ ಅಪಾಯ: ಸುನಂದಾ ನಾವಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕಲುಷಿತ ವಾತಾವರಣ, ವಿಪರೀತ ಧೂಳಿನ ಪ್ರದೇಶದಲ್ಲಿ ವಾಸ ಮಾಡುವ ಜನರಿಗೆ ಕ್ಷಯರೋಗ(ಟಿಬಿ) ಹರಡುತ್ತದೆ, ಕ್ಷಯರೋಗವು (ಟಿಬಿ) ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಗಂಭೀರ ಕಾಯಿಲೆಯಾಗಿದೆ. ಇದರಿಂದ ಜನರು ಆರಂಭದಲ್ಲೇ ಟಿಬಿ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಜೀವಕ್ಕೆ ಅಪಾಯ ಬರಬಹುದು ಎಂದು ಚಿತ್ತಾಪುರ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾದ ಸುನಂದಾ ನಾವಿ ಹೇಳಿದರು.

ತಾಲೂಕಿನ ಇಂಗಳಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಂಚಾಯತಿ ಸದಸ್ಯರಿಗೆ ಆಯೋಜಿಸಿದ ಒಂದು ದಿನದ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಯಿಲೆ ಇರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಕ್ಷಯರೋಗ ಹರಡಬಹುದು. ಹಾಗೆ ಜನಸಂದಣಿ ಇರುವ ಸ್ಥಳಗಳಲ್ಲಿ ಕ್ಷಯರೋಗ ಸುಲಭವಾಗಿ ಹರಡುತ್ತದೆ, ಇದರಿಂದ ಗ್ರಾಮ ಪಂಚಾಯತಿ ಎಲ್ಲಾ ವಾರ್ಡಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕ್ಷಯರೋಗ (ಟಿಬಿ) ತಗುಲಿದ ವ್ಯಕ್ತಿ ಗುಣಮುಖರಾಗುವುದಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಸುಮಾರು ರೂ. 40 ಸಾವಿರ ವೆಚ್ಚವಾಗುತ್ತದೆ ಆದರೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಹೀಗಾಗಿ ಸೋಂಕಿತರು ಇದರ ಲಾಭ ಪಡೆಯಬೇಕು ಎಂದರು.

ಕಲುಷಿತ ನೀರು ಸೇವನೆಯಿಂದ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಇದರಿಂದ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು, ಬೇಕಾಬಿಟ್ಟಿ ತ್ಯಾಜ್ಯ ಎಸೆಯುವುದಕ್ಕೆ ಕಡಿವಾಣ ಹಾಕಬೇಕು, ಗ್ರಾಮದಲ್ಲಿ ಸಮೃದ್ಧ ಆರೋಗ್ಯಕ್ಕೆ ಆದ್ಯತೆ ನೀಡಬೇಕು, ಖಿನ್ನತೆಗೆ ಒಳಗಾದ ಮಹಿಳೆ, ಪುರುಷರು ಕಂಡು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಸಂಪರ್ಕ ಮಾಡಿ, ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಹಾಬಾದ್ ಮೇಲ್ವಿಚಾರಕಿ ನಾಗಮ್ಮ ಸಂಗಶೆಟ್ಟಿ ಮಾತನಾಡಿ, ಇತ್ತೀಚೆಗೆ ಹಲವೆಡೆ ಬಾಲ್ಯವಿವಾಹ ಕಂಡು ಬರುತ್ತಿವೆ. ಇದರಿಂದ ಮಕ್ಕಳ ಮೇಲೆ ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗಿ ಸಾವನ್ನಪ್ಪುತ್ತಿದ್ದಾರೆ. ಹುಟ್ಟುವ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಇದರಿಂದ ಬಾಲ್ಯವಿವಾಹ ಕಂಡು ಬಂದರೆ ಕೂಡಲೇ ಸಂಪರ್ಕ ಮಾಡಿ, ಇಲಾಖೆ ಜೊತೆ ಕೈಜೋಡಿಸಿ ಮಕ್ಕಳ ರಕ್ಷಣೆ ಮಾಡೋಣ ಎಂದು ಕರೆ ನೀಡಿದರು.

ವಾಡಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಬುಳ್ಳಾ ಮಾತನಾಡಿದರು. ಪಂಚಾಯತಿ ಅಧ್ಯಕ್ಷೆ ಅನಿತಾ ನಾಟೀಕಾರ್, ಪಿಡಿಓ ರುದ್ರುಸಾಹು ಅಳ್ಳೋಳಿ, ಕಾರ್ಯದರ್ಶಿ ಸಂಗಮೇಶ ಹೀರೆಮಠ, ಬಿಲ್ ಕಲೆಕ್ಟರ್ ರವಿ ಅಳ್ಳೋಳಿ, ಸದಸ್ಯರಾದ ಕಾಶೀನಾಥ್ ಚನ್ನಗುಂಡ, ಶರಣು ರಾವೂರಕರ್ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿ ದೇವಿಂದ್ರಪ್ಪ ತಳವಾರ, ಎನ್.ಸಿಡಿ ಆಪ್ತಸಮಾಲೋಚಕಿ ಮಂಜುಳಾ ಗುಡುಬಾ ಇದ್ದರು. ತರಬೇತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

 

Spread the love

Leave a Reply

Your email address will not be published. Required fields are marked *

You missed

error: Content is protected !!