Oplus_0

ಕಲಬುರಗಿ ಮೃಗಾಲಯ ಜೂನ್ 15 ರವರೆಗೆ ಪ್ರವೇಶ ಉಚಿತ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಚಿತ್ತಾಪುರ ತಾಲೂಕಿನ ಮಾಡಬೂಳ ಗ್ರಾಮದ ಬಳಿ ಲೋಕಾರ್ಪಣೆ ಆಗಿರುವ ಮೃಗಾಲಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಪರೂಪದ ಪ್ರಾಣಿ ಪಕ್ಷಿಗಳಿಲ್ಲ ಎಂಬ ವೀಕ್ಷಕರ ಆರೋಪದ ಹಿನ್ನೆಲೆಯಲ್ಲಿ ಮೇ 27ರಿಂದ ಜೂನ್ 15 ರವರೆಗೆ ಮೃಗಾಲಯಕ್ಕೆ ಪ್ರವೇಶ ಉಚಿತ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೇ.18 ರಂದು ಅದ್ದೂರಿಯಾಗಿ ಲೋಕಾರ್ಪಣೆಯಾಗಿದ್ದ ಮೃಗಾಲಯಕ್ಕೆ ಜನರು ದಂಡು ದಂಡಾಗಿ ಭೇಟಿ ನೀಡುತ್ತಿದ್ದರು. ಆದರೆ ಅಪಾರ ನಿರೀಕ್ಷೆಯೊಂದಿಗೆ ಭೇಟಿ ನೀಡುತ್ತಿದ್ದ ಪರಿಸರಾಸಕ್ತರಿಗೆ ಯಾವುದೇ ಅಪರೂಪದ ಪ್ರಾಣಿ ಪಕ್ಷಿಗಳು ಇಲ್ಲದ್ದಕ್ಕೆ ಬೇಸರಿಸಿದ್ದರು. ಕೆಲವರು 75 ರೂ. ಪ್ರವೇಶ ರೂ. ಪಾರ್ಕಿಂಗ್ ಗೆ ಹಣ ಪಡೆದು ಪ್ರಾಣಿಗಳೇ ಇಲ್ಲವೆಂದರೆ ಏಕೆ ಆರಂಭಿಸಿದ್ದೀರಿ ಎಂದು ಪ್ರಶ್ನೆಗಳನ್ನು ಕೇಳಿದ್ದರು. ಇದೀಗ ಅರಣ್ಯ ಇಲಾಖೆ, ಮೃಗಾಲಯ ಅಧಿಕಾರಿಗಳು ಮೇ 27 ರಿಂದ ಜೂ.15 ರವರೆಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 1.30 ರವರೆಗೆ ಉಚಿತ ಪ್ರವೇಶವನ್ನು ನೀಡಲು ನಿರ್ಧರಿಸಿದೆ.

ಜೂ.16ಕ್ಕೆ ಸಿಂಹ ದರ್ಶನ: ಮೃಗಾಲಯದಲ್ಲಿ ಈಗಾಗಲೇ ಬನ್ನೆರುಘಟ್ಟದಿಂದ ಸಿಂಹವನ್ನು ತಂದಿದ್ದು, ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಹವಾಮಾನ, ಆರೋಗ್ಯದಲ್ಲಿನ ಏರುಪೇರು, ಪರಿಸರಕ್ಕೆ ಹೊಂದಾಣಿಕೆ ಪರಿವೀಕ್ಷಣೆಯಲ್ಲಿ ಸಿಂಹಗಳಿದ್ದು, ಅವುಗಳನ್ನು ಜೂನ್ 16ಕ್ಕೆ ಸಾರ್ವಜನಿಕರ ವೀಕ್ಷಣಾ ಗ್ಯಾಲರಿಗೆ ಬಿಡಲಾಗುವುದು ಎಂದು ಮೃಗಾಲಯದ ಆರ್‌ಎಫ್‌ಒ ನಾಗೇಶ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!