ಕಲಬುರಗಿ ಜಿಲ್ಲೆಯಲ್ಲಿ ದೀಕ್ಷಣಾ ಗ್ಲೋಬಲ್ ಡೆವಲೆಪಮೆಂಟ್ ಫೌಂಡೇಷನ್ ವತಿಯಿಂದ ಉದ್ಯೋಗ ಮ್ಯಾರಥಾನ್ ಕಾರ್ಯಕ್ರಮ.
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ತವಾಗಿ ದೀಕ್ಷಣಾ ಗ್ಲೋಬಲ್ ಡೆವೆಲಪ್ಮೆಂಟ್ ಫೌಂಡೇಶನ್ ಕರ್ನಾಟಕ ಡಿಜಿಟಲ್ ಎಕೊನೊಮಿ ಮಿಷನ್ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕದ ಕೌಶಲ್ಯಾಧಾರಿತ ಭವಿಷ್ಯದ ಉದ್ಯೋಗ ಸೃಷ್ಟಿಗಾಗಿ ಮ್ಯಾರಥಾನ್ ಕಾರ್ಯಕ್ರಮ ಕಲಬುರಗಿ ಜಿಲ್ಲೆಯಲ್ಲಿ ಇದೇ ಸೆ.16 ರಂದು ಬೆಳಿಗ್ಗೆ 7 ಗಂಟೆಗ ಜಗತ್ ಸರ್ಕಲ್ ದಿಂದ ಸರ್ದಾರ ವಲ್ಲಭಾಯಿ ಪಟೇಲ್ ವೃತ್ತದವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ವಿಬೋತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವ ಶರಣಬಸಪ್ಪ ದರ್ಶನಾಪೂರ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ.ನಮೋಶಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಬಸವರಾಜ ಗಡಗೆ, ಬಿಜಾಸ್ಪೂರ್ ಗ್ರುಪ್ ಸಿಇಓ ಹಾಗೂ ಸಿಎ ಕ್ಷೇತ್ರ ಯೂತ್ ಐಕಾನ್ ಪ್ರಶಾಂತ್ ಬಿಜಾಸ್ ಪುರ ಭಾಗವಹಿಸಲಿದ್ದಾರೆ.
ದೀಕ್ಷಣಾ ಗ್ಲೋಬಲ್ ಡೆವಲೆಪಮೆಂಟ್ ನ ನಿರ್ದೇಶಕ ಸುಂದರ, ಪುಂಡಲಿಕ ಜೊತೆಗೆ ಇರಲಿದ್ದಾರೆ, ಕಲಬುರಗಿ ಜಿಲ್ಲೆಯ ಯುವಕರು, ಸಾರ್ವಜನಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ದೀಕ್ಷಣಾ ಗ್ಲೋಬಲ್ ಡೆವೆಲೆಪಮೆಂಟ್ ಫೌಂಡೇಷನ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ವಿಭೋತೆ ತಿಳಿಸಿದ್ದಾರೆ .