ಕಲಬುರ್ಗಿಯಲ್ಲಿ ನಾಳೆ ರಾಷ್ಟ್ರೀಯ ಸಂಗೀತ ಮಹೋತ್ಸವ ಕಾರ್ಯಕ್ರಮ: ಶಂಕ್ರಪ್ಪ ಹೂಗಾರ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಸ್ನಾತಕೋತ್ತರ ಸಂಗೀತ ಅಧ್ಯಯನ ಹಾಗೂ ಸಂಶೋಧನ ವಿಭಾಗ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಹಾಗೂ ಕರ್ನಾಟಕ ರಾಜ್ಯ ಸಂಘ ಸರ್ಕಾರಿ ನೌಕರರ ಬೆಂಗಳೂರು ಇವರ ಸಹಯೋಗದಲ್ಲಿ ಫೆ. 23 ರಂದು ಬೆಳಗ್ಗೆ 11ಗಂಟೆಗೆ ಗುಲ್ಬರ್ಗ ವಿವಿಯ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ರಾಷ್ಟ್ರೀಯ ಸಂಗೀತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಶಂಕ್ರಪ್ಪ ಬಿ.ಹೂಗಾರ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ. ಅಜಯಸಿಂಗ್, ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್. ಪಾಟೀಲ, ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮುಡ್, ಜಗದೇವ ಗುತ್ತೇದಾರ, ಮಹಾಪೌರ ಯಲ್ಲಪ್ಪ ನಾಯಿಕೋಡಿ ಮಾಜಿ ಸಚಿವ ಮಾಲೀಕಯ್ಯ ವಿ. ಗುತ್ತೇದಾರ, ಕಲಬುರಗಿ, ಬೀದರ್, ಯಾದಗಿರಿ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿಶೇಷ ಅವ್ವಾನಿತರಾಗಿ ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ, ಜಿಲ್ಲಾಧ್ಯಕ್ಷ ಬಸವರಾಜ ಬಳುಂಡಗಿ. ಮಹೇಶ ಹೂಗಾರ, ಗುಲ್ಬರ್ಗ ವಿವಿ ಕುಲಪತಿ ಪ್ರೊ. ಜಿ. ಶ್ರೀರಾಮುಲು, ಕುಲಸಚಿವ ಪ್ರೊ. ರಮೇಶ ಲಂಡನಕರ್, ಸಿಂಡಿಕೇಟ್ ಸದಸ್ಯ ಎಸ್.ಪಿ.ಸುಳ್ಳದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ರಂಗಾಯಣ ಉಪನಿರ್ದೇಶಕಿ ಜಗದೀಶ್ವರಿ ಶೀವಕೇರಿ, ರಂಗಾಯಣ ನಿರ್ದೇಶಕ ಸುಜಾತಾ ಜಂಗಮಶೆಟ್ಟಿ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ. ಪ.ಪೂ. ಶಿಕ್ಷಣ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ. ಎಸ್ ವೈ ಪಾಟೀಲ್. ನೀಲಕಂಠರಾವ್ ಮೂಲಗೆ, ಶಿವಾನಂದ ಖಜೂರಿಗಿ, ಕಿಶೋರ್ ಗಾಯಕವಾಡ ಕಲ್ಯಾಣ್ ರಾವ್ ಸಿಲವಂತ್ ಮತ್ತೀತರ ಪ್ರಮುಖರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ನಂತರ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಂಕರ ಶಾನಭೋಗ್ ಅವರಿಂದ ಹಿಂದೂಸ್ತಾನಿ ಸಂಗೀತ, ರೂಪ ಸಂತೋಷ ಪತ್ತಾರ ಅವರಿಂದ ಭರತ ನಾಟ್ಯ, ಪವನದೀಪ ಸಿ.ವಿ. ಅವರಿಂದ ಕರ್ನಾಟಕ ಸಂಗೀತ, ಪುಣೆಯ ಅಬಾ ಅಟಿ ಅವರಿಂದ ಕಥಕ್, ರಫೀಕ್ ಖಾನ್, ಶಫೀಕ್ ಖಾನ್ ಅವರಿಂದ ಸಿತಾರ್ ದ್ವಂದ್ವ ವಾದನ, ಶ್ರೀಮಯಿ ಅವರಿಂದ ಕುಚಮಡಿ, ಮೌನೇಶಕುಮಾರ ಛಾವಣಿ ಅವರಿಂದ ಸುಗಮ ಸಂಗೀತ ಮತ್ತು ವಚನ ಸಂಗೀತ, ವೀಣಾ ಶೇಷಾದ್ರಿ ಅವರಿಂದ ಸಾವಿತ್ರಿಬಾಯಿ ಫುಲೆ ನೃತ್ಯ ರೂಪಕ, ನಾಗೇಶ್ ಅಡ್ವಾನ್ಕರ್ ಹಿಂದುಸ್ತಾನಿ ಸಂಗೀತ, ಪ್ರಭಯ ಹಿರೇಮಠ್ ಕಥಾ ಕೀರ್ತನ, ಸುಜಾತ ಗೋಪಿನಾಥ್ ಶ್ರೀ ಕೃ.ಪಾ.ಮಂಜುನಾಥ್ ವಾಚನ ವ್ಯಾಖ್ಯಾನ ಜರುಗಲಿವೆ. ಸ್ಥಳೀಯ ಕಲಾವಿದರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಸಿದ್ರಾಮಪ್ಪ ಪೊಲೀಸ್ ಪಾಟೀಲ, ಬಾಬುರಾವ ಕೋಬಾಳ್ ಡಾ. ಶಿವಶಂಕರ್ ಬಿರಾದಾರ, ರಾಘವೇಂದ್ರ ಕುಕರ್ಣಿ, ಜಗದೀಶ ಶರಣರು ನಗನೂರ, ಸಿದ್ದಾರ್ಥ ಚಿಮ್ಮಾಇದಲಾಯಿ, ಮುಂತಾದವರಿಂದ ಗಾಯನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ ಸಿದ್ದರಾಮಪ್ಪ ಪೊಲೀಸ್ ಪಾಟೀಲ್. ಶಿವಶಂಕರ್ ಬಿರಾದಾರ್, ಬಾಬುರಾವ್ ಕೋಬಾಳ್, ಜಗದೀಶ್ ಶರಣರು ನಗನೂರ್, ಬಸಯ್ಯ ಬಿ ಗುತ್ತೇದಾರ್ ತೆಲ್ಲೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.