ಶ್ರೀ ನೀಲಕಂಠ ಕಾಳೇಶ್ವರ ಪುರಾಣ ಕಾರ್ಯಕ್ರಮಕ್ಕೆ ಚಾಲನೆ, ಕಾಳಗಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಜಾಧವ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ನಾವು ಹುಟ್ಟಿದಾಗ ನಮಗೆ ಹೆಸರಿರುವುದಿಲ್ಲ ಸತ್ತಾಗ ನಮಗೆ ಉಸಿರು ಇರುವುದಿಲ್ಲ, ಉಸಿರು ಹೋದ ಮೇಲೂ ಹೆಸರು ಉಳಿಯುವಂತ ಸಾಧನೆ ಮಾಡಬೇಕು ಈ ನಿಟ್ಟಿನಲ್ಲಿ ಕಾಳಗಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ್ ಹೇಳಿದರು.
ಪಟ್ಟಣದ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಕಾಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ಹಮ್ಮಿಕೊಂಡ ಶ್ರೀ ನೀಲಕಂಠ ಕಾಳೇಶ್ವರ ಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಳಗಿ ಪಟ್ಟಣದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಆಗಿವೆ, ಕಾಳಗಿಯ ಐತಿಹಾಸಿಕ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನ ಹಾಗೂ ಕಾಳಗಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಭಕ್ತಿಯಿಂದ ದೇವರ ನಾಮಸ್ಮರಣೆ ಮಾಡಬೇಕು, ನಿಷ್ಕಲ್ಮಶ ಭಕ್ತಿಯಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಫಲ ಸಿಗುತ್ತದೆ, ಶ್ರೀ ನೀಲಕಂಠ ಕಾಳೇಶ್ವರ ಮಹಿಮೆ ಅನಂತ, ಬೇಡಿ ಬಂದ ಭಕ್ತರ ಸಂಕಷ್ಟಗಳನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಪ್ರಥಮ ಬಾರಿ ನೀಲಕಂಠ ಕಾಳೇಶ್ವರ ಪುರಾಣ ಹಮ್ಮಿಕೊಂಡಿರುವುದು ಸಂತೋಷ ಸಂಗತಿಯಾಗಿದ್ದು, ಪುರಾಣ ಆಲಿಸುವುದಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಲಭಿಸಲಿದೆ ಎಂದು ತಿಳಿಸಿದರು.
ಕಾಳಗಿ ಹಿರೇಮಠದ ಪೂಜ್ಯ ನೀಲಕಂಠ ಮರಿದೇವರು ಸಾನಿಧ್ಯ ವಹಿಸಿದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪೂರ, ಯುವ ಕಾಂಗ್ರೆಸ್ ಮುಖಂಡ ನೀಲಕಂಠ ಗುತ್ತೇದಾರ, ವಿಶ್ವನಾಥ ವನಮಾಲಿ, ಮಲ್ಲಿನಾಥ ಪಾಟೀಲ್ ಕೋಲಕುಂದಿ, ನಿಂಬೆಣ್ಣಪ್ಪ ಕೋರವಾರ, ಗ್ರಾ.ಪಂ ಮಾಜಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ರಾಮರಾವ ಪಾಟೀಲ್ ಮೋಘಾ, ಉಮೇಶ ಚವ್ಹಾಣ, ಸಂತೋಷ ಪಾಟೀಲ್ ಮಂಗಲಗಿ, ಜಗಧೀಶ ಪಾಟೀಲ್ ರಾಜಾಪೂರ, ರಾಮುಗೌಡ ಪಾಟೀಲ್, ಶಿವರಾಜ ಪಾಟೀಲ್ ಗೊಣಗಿ, ಶರಣು ಚಂದಾ, ಆನಂದ ಕೇಶ್ವಾರ, ರಮೇಶ ನಾಲವಾಡೆ, ಬಸಯ್ಯಸ್ವಾಮಿ ಪ್ಯಾಟಿಮಠ, ಶಿವಶರಣಪ್ಪ ಗುತ್ತೇದಾರ, ವೇದಪ್ರಕಾಶ ಮೋಟಗಿ, ಜಗನ್ನಾಥ ಚಂದನಕೇರಿ, ಶೇಖರ ಪಾಟೀಲ್, ಚಂದ್ರಕಾಂತ ಜಾಧವ್, ಪ್ರಶಾಂತ ಕದಂ, ರಮೇಶ ಕಿಟ್ಟದ, ಸಂತೋಷ ನರನಾಳ, ಹಣಮಂತಪ್ಪ ಕಾಂತಿ, ರಾಜೇಂದ್ರಬಾಬು ಹೀರಾಪೂರ, ಬಾಬು ನಾಟೀಕರ್, ಪುರುಷೋತ್ತಮ ಗುತ್ತೇದಾರ, ನಾಗರಾಜ ಚಿಕ್ಕಮಠ, ಶಿವರಾಯ ಪಡಶೆಟ್ಟಿ, ರೇವಣಸಿದ್ದ ಕುಡ್ಡಳ್ಳಿ, ಪುರಾಣ ಪ್ರವೀಣ ವೇದ ಪಂಡಿತ ಶಿವಬಸಯ್ಯ ಶಾಸ್ತ್ರೀಗಳು, ಆನಂದ ಚಿಣಮಗೇರಾ, ಮಹೇಶ ತುಪ್ಪದ, ಸಂತೋಷಕುಮಾರ ಕೋಡ್ಲಿ, ಷಣ್ಮುಖಯ್ಯ ಹಿರೇಮಠ ಸೇರಿದಂತೆ ನೀಲಕಂಠ ಕಾಳೇಶ್ವರ ಪುರಾಣ ಕಾರ್ಯಕ್ರಮ ಸಮಿತಿಯ ಸದಸ್ಯರು ಇದ್ದರು.
ಸಂತೋಷ ಪತಂಗೆ ಸ್ವಾಗತಿಸಿ ಪ್ರಾಸ್ತಾವಿಕ ಮಾತಾನಾಡಿದರು. ಶಿವಕುಮಾರ ಶಾಸ್ತ್ರೀ ನಿರೂಪಿಸಿ ವಂದಿಸಿದರು.